ಕೊಡಗು Quick RoundUp

1. ಕೇರಳ ಗಡಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸರ್ಕಾರದ ಅಗತೊಯ ಸೌಲಭ್ಯ

ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಮಹತ್ವದ ಘಟ್ಟವಾಗಿದ್ದು,ಕೋವಿಡ್ ಸಂದರ್ಭದಲ್ಲೂ ಯಶಸ್ವಿಯಾಗಿ ನಡೆಸಲು ಸರ್ಕಾರ ನಿರ್ಧರಿಸಿದ್ದು, ಕೇರಳ ಗಡಿಯಲ್ಲಿರುವ ವಿದ್ಯಾರ್ಥಿಗಳಿಗೆ ಹತ್ತಿರದಲ್ಲೇ ಪರೀಕ್ಷಾ ಕೇಂದ್ರ ಕ್ಕೆ ತೆರಳಲು ವಾಹನದ ವ್ಯವಸ್ತೆ ಮಾಡಲಾಗಿದೆ.


2.ಮೋರ್ ಮಳಿಗಗೆ ಬೀಗ

ಸೋಮವಾರಪೇಟೆಯ ಮೋರ್,ಮಳಿಗೆಯಲ್ಲಿ ಗಣಪತಿ ಎಂಬುವವರಿಗೆ ಕೊಳೆತ ಮೊಟ್ಟೆ ನೀಡಿದ್ದ ಹಿನ್ನಲೆಯಲ್ಲಿ ಮೊರ್ ವ್ಯವಸ್ಥಾಪಕನ್ನು ಪ್ರಶ್ನಿಸಿದ ಸಂದರ್ಭ ಉಡಾಫೆ ಉತ್ತರ ನೀಡಿದ್ದ ಹಿನ್ನಲೆಯಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ, ಮಳಿಗೆ ಮುಚ್ಚಲು ಸೂಚನೆ ನೀಡಿದ್ದಾರೆ.


3. ಬಾಲ ಮಂದಿರಕ್ಕೆ ಜಿಲ್ಲಾಧಿಕಾರಿ

ಮಡಿಕೇರಿಯ ಬಾಲಕ ಬಾಲಮಂದಿರಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ ಅಲ್ಲಿನ ಮಕ್ಕಳ ಕ್ಷೇಮ ಸಮಚಾರ,ಸೌಲಭ್ಯಗನ್ನು ವೀಕ್ಷಿಸಿ ಮಾಹಿತಿ ಪಡೆದರು.ಇದೇ ವೇಳೆ ಮಕ್ಕಳೊಂದಿಗೆ ಕಾಲ ಕಳೆದರು.


ಟಿ ಎಸ್ಟೇಟ್ ನಲ್ಲಿ ಪ್ರವಾಸಿಗರ ತಿರುಗಾಟ

ಟಿ ಶೆಟ್ಟಿಗೇರಿ ಗ್ರಾಮ ಪಂಚಾಯತಿ ಒಳಪಟ್ಟ ಕೆ.ಕೆ.ಆರ್ ಟಿ.ಎಸ್ಟೇಟ್ ವೀಕ್ಷಿಸಲು ಬಂದ ಪ್ರವಾಸಿಗರನ್ನು ಇಂದು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.ಲಾಕ್ಡೌನ್ ನಡುವೆಯೂ ಜಿಲ್ಲೆ ಪ್ರವೇಶಿಸಿ,ಕಾರಿನ ಹಿಂದೆ ಸೈಕಲ್ ಗಳನ್ನು ನೇತಾಕಿಕೊಂಡು ಎಸ್ಟೇಟ್ ನಲ್ಲಿ ಅಡ್ಡಾಡುತ್ತಿದ್ದವರನ್ನು ಸ್ಥಳೀಯರು ಶ್ರೀಮಂಗಲ ಪೋಲಿಸರಿಗೆ ಒಪ್ಪಿಸಿದ್ದಾರೆ.


5.ರಾಯ್ ಪ್ರಕರಣ:ಕಠಿಣ ಕ್ರಮಕ್ಕೆ ಆಗ್ರಹ

ವಿರಾಜಪೇಟೆಯ ರಾಯ್ ಡಿಸೋಜಾ ಸಾವಿಗ ಕಾರಣರಾದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೋಮವಾರಪೇಟೆಯಲ್ಲಿ ಓ ಎಲ್ ವಿ ಧರ್ಮಕೇಂದ್ರದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.


6.ರಾಜಸೀಟಿಗೆ ಜಿಲ್ಲಾಧಿಕಾರಿ ಭೇಟಿ

ಮಡಿಕೇರಿ ನಗರದ ರಾಜಾಸೀಟಿನ ಉದ್ಯಾನವನದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿ ವೀಕ್ಷಣೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ದಿಢೀರ್ ಭೇಟಿ ನೀಡಿ ಮಾಹಿತಿ ಪಡೆದರು.


7.ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (ಪಿ.ಎಂ.ಇ.ಜಿ.ಪಿ) ಕಾರ್ಯಕ್ರಮದಡಿಯಲ್ಲಿ ಕೈಗಾರಿಕೆ, ಉತ್ಪಾದನ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಎಸ್.ಸಿ./ಎಸ್.ಟಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಸೈನಿಕ, ಅಂಗವಿಕಲರು, ಮಹಿಳೆಯರು, ಸಾಮಾನ್ಯ ವರ್ಗ, ಎಲ್ಲಾ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸ್ವ ಉದ್ಯೋಗ ಮಾಡಿಕೊಳ್ಳುವವರಿಗೆ, ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ ರೂ.25 ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಠ ಶೇ.25 ರಿಂದ 35 ರವರೆಗೆ ಸಹಾಯಧನವನ್ನು ನೀಡಲಾಗುವುದು. ಈ ಸೌಲಭ್ಯವನ್ನು ಪಡೆಯಲು ಆನ್‍ಲೈನ್ ಮೂಲಕ www.kvic.org.in (pmegp online application) ಅರ್ಜಿ ಸಲ್ಲಿಸಬಹುದು.


8.ಲಸಿಕಾ ಸಂದೇಶಕ್ಕೆ ಫೋಟೋ

ಮಡಿಕೇರಿಯಲ್ಲಿರುವ ಲಸಿಕಾ ಕೇಂದ್ರಗಳಲ್ಲಿ ರೋಟರಿ ಸಂಸ್ಥೆಯೊಂದು ಯುವಜನರ ಆಕರ್ಷಣೆಗಾಗಿ ನಾನು ಲಸಿಕೆ ಹಾಕಿಸಿಕೊಂಡಿರುವ ಸಂದೇಶದ ಫೋಟೋ ತೆಗೆಸಿಕೂಳ್ಳುವ ವಿಶೇಷ ಪ್ರಯತ್ನ ಮಾಡಲಾಗಿದೆ.


9.ಮಾಸ್ಕ್ ಹಾಕದೆ ರಂಪಾಟ

ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕನೊಬ್ಬ ಮಾಸ್ಕ್ ಹಾಕಿಕೊಳ್ಳದೆ ಪ್ರಯಾಣ ಬೆಳಸಲು ಮುಂದಾದ ಘಟನೆ ನಡೆದಿದೆ.ಇದರಿಂದ ಆಕ್ರೋಷಗೊಂಡ ಸಹ ಪ್ರಯಾಣಿಕರು, KSRTC ವ್ಯವಸ್ಥಾಪರಿಗೆ ದೂರು ನೀಡಿದ್ದು ಸ್ಥಳಕ್ಕೆ ಆಗಮಿಸಿದ 112 ಪೋಲಿಸರು ಸಮಸ್ಯೆ ಬಗೆಹರಿಸಿದರು.


10‌. ಕೊಳಕು ಮಂಡಲ ರಕ್ಷಣೆ

ಕುಶಾಲನಗರದ ಮಾದಾಪಟ್ಟಣದ ಕಾಟಿಕೆರೆಯಲ್ಲಿ ನ ದೊಡ್ಡಣ್ಣ ಎಝಬುವವರ,ಮನೆ ಹಿತ್ತಲಿನಲ್ಲಿ ವಿಷಪೂರಿತ ಕೊಳಕುಮಂಡಲ ಹಾವು ಪ್ರತ್ಯಕ್ಷವಾಗಿದ್ದು ಸ್ಥಳಕ್ಕೆ ಆಗಮಿಸಿದ ಸುಂಟಿಕೊಪ್ಪದ ಸ್ನೇಕ್ ಸಾಜಿ ಸೆರೆ ಹಿಡಿದು ಪಕ್ಕದ ಅರಣ್ಯಕ್ಕೆ ಬಿಡಲಾಯಿತು.


ಕೆ.ರಾಮಾಚಾರ್ ನಿಧನ

ಗೋಣಿಕೊಪ್ಪಲಿನಲ್ಲಿರುವ ವಿನೋದ್ ಇಂಜಿನಿಯರಿಂಗ್ ವರ್ಕ್ಸನ ಮಾಲಿಕರು 86 ರ ಪ್ರಾಯದ ಕೆ.ರಾಮಾಚಾರ್ ರವರು‌ ಮಧ್ಯರಾತ್ರಿ 12.30 ರ ಸಮಯದಲ್ಲಿ ನಿಧನರಾದರು.ಇವರ ಅಂತಮ ಸಂಸ್ಕಾರ ಇಂದು ಮಧ್ಯಾಹ್ನ ಗೋಣಿಕೊಪ್ಪಲಿನಲ್ಲಿ ನಡೆಯಲಿದೆ. ಪತ್ನಿ, ಮಗ, ಸೊಸೆಯಂದಿರು ಮೊಮ್ಮಕ್ಕಳು, ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಸಮಾಜ ಸೇವಕರಾಗಿದ್ದ ಇವರು ಇಂದು ವಿಜ್ರಂಬಣೆಯಿಂದ ಆಚರಿಸಲ್ಪಡುತ್ತಿರುವ ಗೋಣಿಕೊಪ್ಪಲಿನ ಶ್ರೀ ಕಾವೇರಿ ದಸರಾ ಸಮಿತಿ, ವಿರಾಜಪೇಟೆ ತಾಲೂಕು ವರ್ತಕರ ಬ್ಯಾಂಕ್ ಸ್ಥಾಪಕರಲ್ಲೊಬ್ಬರು. ಸಮಾಜಮುಖಿ ಕೆಲಸಗಳಲ್ಲಿ ಮುಂದಿನ ಸಾಲಿನಲ್ಲಿ ಗುರುತಿಸಿಕೊಳ್ಳುತಿದ್ದರು. ಇವರ ಆತ್ಮಕ್ಕೆ ಸದ್ಗತಿ ದೊರಕಲಿ, ಇವರ ಅಗಲಿಕೆಯ ದುಃಖವನ್ನು ಮರೆಯುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ.

  • ವರದಿ: ಕೇಶವ ಕಾಮತ್, ಗೋಣಿಕೊಪ್ಪಲು.

error: Content is protected !!