ಕೊಡಗು Quick Round Up

1.ಬಿಜೆಪಿ ಯುವಮೋರ್ಚಾ ವಿರಾಜಪೇಟೆ ಮಂಡಲ

ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಬಲಿದಾನ ದಿವಸದಿಂದ ಅವರ ಜನ್ಮದಿನದ ವರಗಿನ ಪ್ರಯುಕ್ತ ಹಮ್ಮಿಕೊಂಡಿರುವ “ವೃಕ್ಷಾರೋಹಣ ಕಾರ್ಯಕ್ರಮವನ್ನು” ವಿರಾಜಪೇಟೆ ಮಂಡಲ ಯುವಮೋರ್ಚಾ ವತಿಯಿಂದ ಪೊನ್ನಂಪೇಟೆ ಸರ್ಕಾರಿ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಈ ಸಂದರ್ಭದಲ್ಲಿ ವಿರಾಜಪೇಟೆ ಮಂಡಲ ಅಧ್ಯಕ್ಷರಾದ ಸೋಮೆಯಂಡ ಕವನ್ ಕಾರ್ಯಪ್ಪ, ಪೊನ್ನಂಪೇಟೆ ಯುವಮೋರ್ಚಾ ಅಧ್ಯಕ್ಷ ವಚನ್ ದೇವಯ್ಯ ,ಮಹಾಶಕ್ತಿ ಕೇಂದ್ರದ ಸಂಚಾಲಕರಾದ ಸುಧೀರ್, ಶಕ್ತಿಕೇಂದ್ರ ಪ್ರಮುಖರ ಕೋಟೆರ ಕಿಶನ್ ಹಾಗೂ ಸಹ ಪ್ರಮುಖರಾದ ಮಧು,ಪಕ್ಷದ ಹಿರಿಯ ಕಾರ್ಯಕರ್ತರಾದ ಮುದ್ದೇಯಡ ಮಂಜು ತಾಲ್ಲೂಕು ಯುವ ಮೋರ್ಚಾ ಉಪಾಧ್ಯಕ್ಷರಾದ ರಂಜನ್ ಪೊನ್ನಣ್ಣ, ಮಲ್ಲಪ್ಪನೇರ ನಾಚಪ್ಪ, ವಿವೇಕ್ ರಾಯ್ಕರ್, ಪ್ರಧಾನ ಕಾರ್ಯದರ್ಶಿ ಪ್ರಧಾನ್ ಬೋಪಣ್ಣ, ಜಿಲ್ಲಾ ಕಾರ್ಯದರ್ಶಿಯಾದ ತಾತಂಡ ಹಿತೇಶ್ ಮುತ್ತಪ್ಪ,ತಾಲ್ಲೂಕು ಯುವ ಮೋರ್ಚಾ ಕಾರ್ಯದರ್ಶಿ ದೀಪಕ್ ಸುಬ್ಬಯ್ಯ,ತಾಲೂಕು ಸದಸ್ಯ ಕಿಶನ್ ಹಾಗೂ ನವೀನ್ ಮತ್ತು ಪಕ್ಷದ ಹಿರಿಯ ಕಾರ್ಯಕರ್ತರು , ಹಾಗೂ ಯುವ ಮೋರ್ಚಾದ ಸದಸ್ಯರು ಹಾಜರಿದ್ದರು

2.ಶಾಸಕರಿಂದ ಕಾರು ಹಸ್ತಾಂತರ

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ವತಿಯಿಂದ “ಐರಾವತ” ಯೋಜನೆಯಡಿ ಅವಿನಾಶ್ ಹೆಚ್.ಎ ಬಿನ್ ಅಣ್ಣಯ್ಯ, ಹೆಬ್ಬಾಲೆ ಗ್ರಾಮ ಮತ್ತು ಅಂಚೆ, ಕುಶಾಲನಗರ ಹೋಬಳಿ, ಸೋಮವಾರಪೇಟೆ ತಾಲ್ಲೂಕು ಇವರಿಗೆ ನಿಗಮದಿಂದ ರೂ. 5.00 ಲಕ್ಷ ಸಹಾಯಧನ ಮಂಜೂರಾಗಿದ್ದು, ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ಅವರು ಫಲಾನುಭವಿಗೆ ಸ್ವಿಪ್ಟ್ ಡಿಸೈರ್ ಕಾರನ್ನು ಹಸ್ತಾಂತರಿಸಿದರು.

3.ಕೆ-ಸಿಇಟಿ ಪರೀಕ್ಷೆಗೆ ತರಬೇತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಪಿಯುಸಿ ನಂತರದ ವೃತ್ತಿಪರ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕ ಸರ್ಕಾರ ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಕೆ-ಸಿಇಟಿ) 30 ದಿನಗಳ ಆನ್‍ಲೈನ್ ತರಬೇತಿ ನೀಡಲು ನಿರ್ಧರಿಸಿದ್ದು, ಆಸಕ್ತರು ಜುಲೈ, 17 ರೊಳಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಮುಕ್ತಗಂಗೋತ್ರಿ’ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

4.ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರ ನಿರ್ಬಂಧಕಾಜ್ಞೆ ತಿದ್ದುಪಡಿ ಆದೇಶ

ಕೊಡಗು ಜಿಲ್ಲೆಯಲ್ಲಿ ಮರಳುಗಾರಿಕೆ ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನ ಸಂಚಾರದ ನಿರ್ಬಂದ ವಿಧಿಸಿ ಹೊರಡಿಸಲಾದ ಆದೇಶವನ್ನು ಭಾಗಶ: ಮಾರ್ಪಾಡು ಮಾಡಿ ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ಮಾಡುವ ಎಲ್ಲಾ ಸರಕು ಸಾಗಾಣಿಕೆ ವಾಹನಗಳನ್ನು ಮಾತ್ರ ನಿರ್ಭಂದಿಸಲಾಗಿದೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬರುವಂತೆ ಆಗಸ್ಟ್, 16 ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

4.ಕಾಲೇಜು ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆಯಲ್ಲಿ ಕೋವಿಡ್ ಲಸಿಕೆ ನೀಡಿ; ಪ್ರತಾಪ್ ಸಿಂಹ

ಕಳೆದ ಒಂದುವರೆ ವರ್ಷದಿಂದ ಕೋವಿಡ್-19 ಹಿನ್ನೆಲೆ ಶಾಲಾ-ಕಾಲೇಜುಗಳು ತೆರೆದಿಲ್ಲದಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಿನ್ನೆಡೆಯಾಗಿದ್ದು, ಶಾಲಾ ಕಾಲೇಜುಗಳನ್ನು ತೆರೆಯುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ಮೇಲೆ ಕೋವಿಡ್ ಲಸಿಕೆಯನ್ನು ನೀಡಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದರಾದ ಪ್ರತಾಪ್ ಸಿಂಹ ಅವರು ನಿರ್ದೇಶನ ನೀಡಿದರು.

6. ಕಾವಲು ಪಡೆಯಿಂದ ಸಸ್ಯ ಸೇವೆ

ಕುಶಾಲನಗರ ಫಾತಿಮಾ ಪ್ರೌಢ ಶಾಲೆಯಲ್ಲಿ ಕರ್ನಾಟಕ ಕಾವಲುಪಡೆ ವತಿಯಿಂದ ಪರಿಸರ ದಿನದ ಅಂಗವಾಗಿ ಮಾವು ಸೀಬೇ ಕಾಯಿ ಬೆಟ್ಟದ ನಲ್ಲಿಕಾಯಿ ಸೇರಿದಂತೆ ಹಲವು ಹಣ್ಣಿನ ಗಿಡಗಳನ್ನು ನೇಡಲಾಯಿತು ಶಾಲೆಯ ಮುಖ್ಯ ಶಿಕ್ಷಕರು ಸೇರಿದಂತೆ ಸಹ ಶಿಕ್ಷಕರು ಮತ್ತು ಕರ್ನಾಟಕ ಕಾವಲುಪಡೆಯ ಕೃಷ್ಣ ಸೇರಿದಂತೆ ಇತರೆ ಸದಸ್ಯರು ಪಾಲ್ಗೊಂಡರು.

7.ಮರಳು ಅಡ್ಡೆ ಮೇಲೆ ದಾಳಿ

ಮುಕ್ಕೋಡ್ಲುವಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ಧ ಹಿನ್ನಲೆ 112 ಕರೆ ಮೇರೆಗೆ
ಮಡಿಕೇರಿ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಓರ್ವನ ಬಂಧಿಸಿದ್ದು, ಒಂದು ಲೋಡ್ ಮರಳು, ಮಿನಿ ಲಾರಿ ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ ವೇಳೆ ಇಬ್ಬರು ಪರಾರಿಯಾಗಿದ್ದಾರೆ.

8.ನೂತನ ಸದಸ್ಯರಿಗೆ ಸನ್ಮಾನ

ಇತ್ತೀಚೆಗೆ ಮಡಿಕೇರಿ ನಗರಸಭೆಗೆ ಆಯ್ಕೆಯಾದ ನೂತನ ಸದಸ್ಯರಿಗೆ ಶಾಸಕದ್ವಯರಾದ ಕೆ.ಜಿ ಬೋಪಯ್ಯ,ಅಪಚ್ಚು ರಂಜನ್ ಸಂಸದ ಪ್ರತಾಪ್ ಸಿಂಹ,ಎಂಎಲ್ಸಿ ಸುನಿಲ್ ಸುಬ್ರಮಣಿ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

9.ಆದಿವಾಸಿ ಕುಟುಂಬಗಳಿಗೆ ಕಿಟ್ ವಿತರಣೆ

ಬನವಾಸಿ ಕನ್ನಡಿಗರು ಮತ್ತು ಕೆಲವು ಸಂಸ್ಥೆಗಳ ಸಹಕಾರದಿಂದ ಕೊಡಗಿನ ನಾಗರಹೊಳೆ ಭಾಗದ ನೂರೈವತ್ತು ಆದಿವಾಸಿ ಕುಟುಂಬಗಳಿಗೆ ಆಹಾರ ಸಾಮಗ್ರಿ ಮತ್ತು ಅಗತ್ಯ ದಿನಬಳಕೆ ವಸ್ತುಗಳನ್ನು ನಮ್ಮ ಕೊಡಗು ತಂಡ ದ ನೇತೃತ್ವದಲ್ಲಿ ವಿತರಿಸಲಾಯಿತು.

ಕಳೆದ ಒಂದು ತಿಂಗಳಿನಿಂದ ದಾನಿಗಳ ಸಹಾಯದಿಂದ 500 ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳಿಗೆ ಇದೇ ತಂಡ ಆಹಾರ ಕಿಟ್ ವಿತರಿಸಿ ಸಮಾಜಕ್ಕೆ ಮಾದರಿಯಾಗಿದ್ದು, ಸಮಾಜದಿಂದ ಕಡೆಗಣಿಸಲ್ಪಟ್ಟಿರುವ ಆದಿವಾಸಿ ಕುಟುಂಬಗಳಿಗೆ ನೆರವಾಗಿದೆ.

error: Content is protected !!