ಕೊಡಗು Quick Round Up

ಕೊಡಗು ಜಿಲ್ಲೆಯಲ್ಲಿ ಪ್ರವಾಹ ಮತ್ತು ಅಲ್ಲಲ್ಲಿ ಭೂಕುಸಿತ ಪ್ರಕರಣಗಳು ಮುಂದುವರೆದಿದೆ,ರೆಡ್ ಅಲರ್ಟ್ ಘೋಷಣೆಯಾಗಿದ್ದು,ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲೇ ಬೀಡು ಇದ್ದು ಅತಿವೃಷ್ಟಿ ಜವಬ್ದಾರಿ ವಹಿಸಿಕೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನಡುವೆ ತುರ್ತು ಸಂದರ್ಭಕ್ಕೆ ಸೇನಾ ಹೆಲಿಕಾಪ್ಟರ್ ಗೂ ಅನುಮತಿ ಪಡೆಯಲಾಗಿದೆ.

ಜಿಲ್ಲೆಯಲ್ಲಿ ಏನಾನಾಗುತ್ತಿದೆ ಇಲ್ಲಿದೆ…!

ಬಲಮುರಿಯಲ್ಲಿ ಕ್ಷಣ ಕ್ಷಣಕ್ಕೂ ನೀರಿನ ಏರಿಕೆಯಾಗುತ್ತಿರುವುದು ಕಂಡು ಬರುತ್ತಿದ್ದು, ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ.

ಮಡಿಕೇರಿ- ಸೋಮವಾರಪೇಟೆ ರಸ್ತೆಯಲ್ಲಿ ಹಲವೆಡೆ ಬಿರುಕುಗಳು ಕಂಡು ಬಂದಿವೆ. ಇದು ಅಪಾಯದ ಮುನ್ಸೂಚನೆ ನೀಡಿದೆ.

ಮಡಿಕೇರಿ ಸಿದ್ದಾಪುರ ರಸ್ತೆಯ ಚಟ್ಟಳ್ಳಿ ಬಳಿ ಭೂಕುಸಿತ ಉಂಟಾಗಿ, ರಸ್ತೆ ಸಂಚಾರಕ್ಕೆ ತೊಡಕಾಗಿದ್ದು, ಕೇವಲ ಲಘು ವಾಹನಗಳಿಗಷ್ಟೇ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಕುಶಾಲನಗರದ ತಗ್ಗು ಪ್ರದೇಶಗಳಿಗೆ ಕಾವೇರಿ ನದಿ ನೀರು ನುಗ್ಗಿದ್ದು, ಪ್ರವಾಹದ ಭೀತಿ ಎದುರಾಗಿದೆ.

ಮುಕ್ಕೊಡ್ಲು ಹೆಮ್ಮತಾಳು ಬಳಿ ಸಣ್ಣ ಪುಟ್ಟ ತೊರೆಗಳು ಸೇರಿ ನೀರು ಹೊಳೆಯಂತೆ ಹರಿಯಲಾರಂಭಿಸಿದ್ದು, ಅಕ್ಕ ಪಕ್ಕದ ತೋಟದಲ್ಲಿ ಮುಳುಗಡೆಯ ದುಸ್ತರ ಪರಿಸ್ಥಿತಿ ಎದುರಾಗಿದೆ.

2018ರಲ್ಲಿ ಸಂಭವಿಸಿದ್ದ ಭೂ ಕುಸಿತದ ಸ್ಥಳದಲ್ಲೇ ಹಟ್ಟಿ ಹೊಳೆ ಸಮೀಪ ಮತ್ತೆ ಅದೇ ಅನಾಹುತ ಸಂಭವಿಸಿದೆ. ಅಲ್ಲಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಿದರು.

ಅಯ್ಯಂಗೇರಿ ಗ್ರಾಮದ ಶ್ರೀಮತಿ ಬಿದ್ದಿಯಂಡ ಪೊನ್ನಪ್ಪ ಅವರ ಮನೆ ಮೇಲೆ ಬರೆ ಕುಸಿದಿದ್ದು, ಪಂಚಾಯ್ತಿ ಅಧ್ಯಕ್ಷ ಕುಯ್ಯಮುಡಿ ರಂಜಿತ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರದ ಭರವಸೆ ನೀಡಿದ್ದಾರೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಕಾವೇರಿ ನದಿ ನೀರಿನ ಏರಿಕೆ ಕಾಣುತ್ತಿದ್ದು, ಮಡಿಕೇರಿ-ಭಾಗಮಂಡಲ ರಸ್ತೆ ಮಾರ್ಗ ಸಂಚಾರ ಸ್ಥಗಿತಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

ಮುಕ್ಕೊಡ್ಲು ಗ್ರಾಮದ ಅವಂಡಿ ಎಮ್ಮತಾಳು ರಸ್ತೆ ಭೂ ಕುಸಿತದಿಂದ ಸ್ಥಗಿತವಾಗಿದ್ದು, ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಭೇಟಿ ನೀಡಿ ವಸ್ತು ಸ್ಥತಿ ವೀಕ್ಷಿಸಿದರು.

ಕುಶಾಲನಗರದ ವಿವಿಧ ಬಡಾವಣೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿರುವುದರಿಂದ ಪಟ್ಟಣ ಪಂಚಾಯ್ತಿ ಆಟೋದಲ್ಲಿ ಸ್ಪೀಕರ್ ಮೂಲಕ ಜನರಿಗೆ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಸೂಚನೆ ನೀಡುತ್ತಿದೆ.

ಮದೆನಾಡು ಸಮೀಪ ಕರ್ತೋಜೆ ಎಂಬಲ್ಲಿ ರಸ್ತೆ ಕುಸಿಯುತ್ತಿದ್ದು, ಭಾರೀ ವಾಹನಗಳ ಸಂಚಾರಕ್ಕೆ  ತಡೆ ಒಡ್ಡಲು ಶಾಸಕ ಕೆ.ಜಿ ಬೋಪಯ್ಯ ಅವರು ಪರಿಶೀಲನೆ ನಡೆಸಿ, ಸೂಚನೆ ನೀಡಿದ್ದಾರೆ.

ಹಾರಂಗಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರಿನ ಒಳ ಹರಿವು ಹಿನ್ನಲೆ 20 ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡುವಂತೆ ಅಣೆಕಟ್ಟು ಅಧಿಕಾರಿಗಳಿಗೆ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಸೂಚನೆ ನೀಡಿದ್ದಾರೆ.

error: Content is protected !!