ಕೊಡಗು District RoundUp

ಮುಟ್ಟಗೋಲು-ದಂಡ

ಕೊಡಗಿನಲ್ಲಿ ಲಾಕ್ಡೌನ್ ಸಡಿಲಿಕೆಯಾಗದಿದ್ದರೂ ನೆರೆಯ ರಾಜ್ಯ ಕೇರಳ ಗಡಿ ಸೇರಿದಂತೆ ಇತರೆ ಜಿಲ್ಲೆಯ ವಾಹನಗಳು ಕೊಡಗಿನತ್ತ ಆಗಮಿಸಿದೆ.ಇವರಲ್ಲಿ ಹೆಚ್ಚಾಗಿ ಪ್ರವಾಸಿಗರೇ ಕಂಡುಬಂದಿದ್ದು,ಅಂತಹವರ ಮೇಲೆ ಜಿಲ್ಲಾಡಳಿತ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಲಾಗಿದೆ.ಇದಲ್ಲದೆ ಮಡಿಕೇರಿ ನಗರದ ಎರಡು ಹೋಂಸ್ಟೇ ಗಳಲ್ಲಿ ಬೆಂಗಳೂರಿನ ಪ್ರವಾಸಿಗರು ಇದ್ದ ಕಾರಣ ಹೋಂಸ್ಟೇ ಗೆ ಬೀಗ ಜಡಿಯಲಾಗಿದೆ.
ಕಾಳಜಿ ಕೇಂದ್ರಕ್ಕೆ ತೆರಳಲು ಸೂಚನೆ

ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಗೆ ಹೊಂದಿಕೊಂಡಂತೆ ಪ್ರವಾಹಪೀಡಿತ ಕಾವೇರಿ ನದಿ ತಟದ ಗ್ರಾಮಗಳಾದ ಕೊಂಡಂಗೇರಿ,ಕರಡಿಗೋಡು,ಗುಹ್ಯ ಗ್ರಾಮಗಳ ವಾಸಿಗಳು ಸುರಕ್ಷಿತ ಸ್ಥಳದಲ್ಲಿರುವ ಕಾಳಜಿ ಕೇಂದ್ರಕ್ಕೆ ಜುಲೈ 15ರ ಒಳಗಾಗಿ ತೆರಳುವಂತೆ ನೋಟಿಸ್ ನೀಡಲಾಗಿದೆ.
ವ್ಯಾಘ್ರನ ಹೆಜ್ಜೆ


ವಿರಾಜಪೇಟೆ ವ್ಯಾಪ್ತಿಯಲ್ಲಿ ಹುಲಿಗಳ ಚಲನವಲನ ಹೆಚ್ಚಾಗಿರುವುದಕ್ಕೆ ಬೇಸಗೂರಿನ ಭತ್ತದ ಗದ್ದೆಯಲ್ಲಿ ಕಂಡು ಬಂದಿರುವುದೇ ಸಾಕ್ಷಿ.ಇತ್ತೀಚೆಗಷ್ಟೆ ಈ ಭಾಗದಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆದಿದ್ದು,ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕಾಗಿದೆ.
ಮಳೆಯ ನಿರೀಕ್ಷೆಯಲ್ಲಿ ರೈತರು

ಜಿಲ್ಲೆಯಲ್ಲಿ ಬಿತ್ತನೆಯಾದ ಅಲ್ಪಾವಧಿ ಬೆಳೆಯಾದ ಮೆಕ್ಕೆ ಜೋಳದ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.ಈಗಾಗಲೇ ಬಿತ್ತನೆ ಮಾಡಿರುವ ಬೀಜಗಳು ಮೂಳಕೆಯೊಡೆದಿದ್ದು ಕಳೆನಾಶಕ ಹೊಡೆದು ರಸಗೊಬ್ಬರಗಳನ್ನು ಹಾಕಿ ಆಕಾಶದತ್ತ ಮುಖಮಾಡಿದ್ದಾರೆ. ಕಾವೇರಿ ನದಿ ಆಶ್ರಿತ ಪ್ರದೇಶದಲ್ಲಿ ಕೆಲವು ರೈತರು ಯಂತ್ರಗಳನ್ನು ನಂಬಿದ್ದರೆ,ಅರೆ ನೀರಾವರಿ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಸದ್ಯದಲ್ಲೇ ಕೇರಳದಿಂದ ದುಬೈಗೆ ವಿಮಾನಯಾನ

ಕೋವಿಡ್ ಆರ್ಭಟ ಕಡಿಮೆಯಾದ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಗೆ ಸಮೀಪದ ಕಣ್ಣೂರು ವಿಮಾನ ನಿಲ್ದಾಣ ಸೇರಿದಂತೆ ಇತರೆ ವಿಮಾನ ನಿಲ್ದಾಣಗಳಿಂದ ದುಬೈಗೆ ವಿಮಾನ ಹಾರಾಟ ನಡೆಸಲು ಫ್ಲೈ ದುಬೈ ಮತ್ತು ಎಮಿರೇಟ್ಸ್ ಏರಲೈನ್ಸ್ ಸಂಸ್ಥೆ ನಿರ್ಧರಿಸಿದ್ದು ಜುಲೈ 3 ರಿಂದ ಹೈದರಾಬಾದ್ ನಿಂದ,ಜುಲೈ 7 ರಿಂದ ವಿಮಾನ ಹಾರಾಟ ಆರಂಭವಾಗಲಿದೆ.ಆದರೆ, ಪ್ರಯಾಣಿಕರು ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕೆಂದು ಏರ್ಲೈನ್ಸ್ ಸಂಸ್ಥೆಗಳು ತಿಳಿಸಿದೆ.