ಕೊಡಗು District Quick RoundUp

ಜಿಲ್ಲಾಡಳಿತದ ನಿರ್ದೇಶನದಂತೆ ಜೂನ್ 18ರಂದು ಜಿಲ್ಲೆಯ ಹೋಂಸ್ಟೇ ಯಲ್ಲಿ ಕರ್ತವ್ಯ ನಿರ್ವಹಿಸುವ ಮುಂಚೂಣಿ ಸಿಬ್ಬಂದಿಗಳು (18-44 ವರ್ಷ)ದವರಿಗೆ ಗೋಣಿಕೊಪ್ಪ ಭಾಗದಲ್ಲಿ ಲಸಿಕೆ ನೀಡಲು ನಿರ್ಧರಿಸಿದ್ದಾರೆ. ಅಗತ್ಯ ಗುರುತಿನ ಚೀಟಿಗಳೊಂದಿಗೆ
ಗೋಣಿಕೊಪ್ಪ ಮಹಿಳಾ ಸಮಾಜದಲ್ಲಿ ಲಸಿಕೆ ಪಡೆಯಬಹುದಾಗಿದೆ.

ವಿರಾಜಪೇಟೆ ಪೂನ್ನಂಪೇಟೆ ಭಾಗದಲ್ಲಿ ಗಾಳಿ ,ಮಳೆ ಹೆಚ್ಚಾಗಿದ್ದು ಬಹುತೇಕಕಡೆಗಳಲ್ಲಿ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಚೆನ್ನಂಗೋಲಿ ಮಾಯಾಮುಡಿ ರಸ್ತೆಯ ಮಾರ್ಗದಲ್ಲಿ ರಸ್ತೆಗೆ ಅಡ್ಡಲಾಗಿ ಬಾರೀ ಗಾತ್ರದ ಮರ ಉರುಳಿ ತೊಂದರೆ ಉಂಟಾಗಿತ್ತು,ತಿತಿಮತಿ ಅರಣ್ಯ ಸಿಬ್ಬಂದಿಗಳು ಸ್ಥಳಕೆ ಆಗಮಿಸಿ ಮರ ತೆರವುಗೊಳಿಸಿದರು.

ಮಡಿಕೇರಿ ನಗರದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು,ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಎಲ್.ಐ.ಸಿ ವೃತ್ತದ ಬಳಿಯ ಅಂಗಡಿ ಮಳಿಗೆಗೆ ನೀರು ನುಗ್ಗಿ ಸಮಸ್ಯೆ ಉಂಟಾಯಿತು.

ದಿಡ್ಡಳ್ಳಿಯಿಂದ ಪುನರ್ವಸತಿ ಪಡೆದು ಬಸವನಳ್ಳಿಯಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದವರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದೆ,ದಿನಬಳಕೆ ವಸ್ತುಗಳು ನೀಡುವುದಿಲ್ಲ ಎನ್ನುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಆ ದಿಸೆಯಲ್ಲಿ ಜೂನ್ 18 ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣ ಹಾಗೂ ಮಧ್ಯಾಹ್ನ 2.30 ಗಂಟೆಗೆ ಹಾರಂಗಿ ಜಲಾಶಯ ಬಳಿ ಎನ್‍ಡಿಆರ್‍ಎಫ್, ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಯಿಂದ ಅಣಕು ಪ್ರದರ್ಶನ ನಡೆಯಲಿದೆ.

ಲಾಕ್ಡೌನ್ ನಿಂದಾಗಿ
ಕುಡಿಯಲು ಮದ್ಯ ಸಿಗಲಿಲ್ಲ ಎನ್ನುವ ಕಾರಣಕ್ಕೆ ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಪಾಪಣ್ಣ ಎಂಬಾತ ತಾಯಿಯೊಂದಿಗೆ ಜಗಳವಾಡಿ ಬಳಿಕ ತನ್ನ ಕಾಲನ್ನೇ ಕತ್ತರಿಸಿಕೊಂಡ ಘಟನೆ ನಡೆದಿದೆ‌. ಇದೀಗ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬಸವನಳ್ಳಿಯ ಗಿರಿಜನ ಕಾಲೋನಿಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು,6 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಬಸವನಳ್ಳಿಯ ಗಿರಿಜನ ಕಾಲೋನಿಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು,6 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಅರಕಲಗೂಡುವಿನ ಅಮ್ಜದ್ ಖಾನ್, ಇಮ್ರಾನ್ ಭಾಷ ಬಂಧಿತ ಆರೋಪಿಗಳು.
ಕೂತಿ ಗ್ರಾಮದಿಂದ ಖರೀದಿಸಿದ ಜಾನುವಾರುಗಳನ್ನು ಅರಕಲುಗೋಡಿಗೆ ಸಾಗಾಟ ಮಾಡುತ್ತಿದ್ದ ಸಂದರ್ಭ ಬೆಳಗಿನ ಜಾವ 6 ಗಂಟೆಗೆ ಗೆಜ್ಜೆಹಣಕೋಡು ರಸ್ತೆಯಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

error: Content is protected !!