ಕೊಡಗು Dist roundups

1.ಸದ್ಯಕ್ಕೆ ಅನ್ಲಾಕ್ ಇಲ್ಲ, ವೇತನ ನೀಡಲು ಕ್ರಮ

ಕೊಡಗಿನಲ್ಲಿ ಪಾಸಿಟಿವಿಟಿ ಕಡಿಮೆಯಾಗುವರೆಗೆ ಜಿಲ್ಲೆಯಲ್ಲಿ ಅನ್ ಲಾಕ್ ಮಾಡುವ ಪ್ರಶ್ನೆಯೇ ಇಲ್ಲ.
ಕೋವಿಡ್ 19 ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ
ಆರೋಗ್ಯ ಸಿಬ್ಬಂದಿ ವೇತನ ಕಳೆದ ಒಂದು ತಿಂಗಳಿಂದ ವಿಳಂಬವಾಗಿದ್ದು,ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಭರವಸೆ ನೀಡಿದ್ದಾರೆ.ಮಡಿಕೇರಿಯಲ್ಲಿ ಕೋವಿಡ್ ಸಂಬಂಧ ನಡೆದ ಸಭೆ ಬಳಿಕ ಮಾತನಾಡಿ ಅವರು
ಇಂದಿನಿಂದಲೇ ವೇತನ ನೀಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸಚಿವ ಸುಧಾಕರ್ ಸೂಚನೆ ನೀಡಿದ್ದಾರೆ.
2.ಕಂದಾಯ ಮಾಹಿತಿ ತಂತ್ರಾಂಶ ಅಭಿವೃದ್ಧಿ

ಕೊಡಗು ಜಿಲ್ಲೆ ಕಂದಾಯ ಇಲಾಖೆಯ ಮಡಿಕೇರಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕಡತ ನಿರ್ವಹಣೆಗೆ ಸಂಬಂಧಪಟ್ಟಂತೆ National Informatics Center(NIC) ಮತ್ತು JALATTICS ಸಂಸ್ಥೆಯ ಸಹಯೋಗದೊಂದಿಗೆ ನೂತನವಾಗಿ Revenue File Monitaring System (RFMS) ಎಂಬ ತಂತ್ರಾಂಶವನ್ನು ಅಭಿವೃಧ್ದಿಪಡಿಸಲಾಗಿದ್ದು, ಅರ್ಜಿದಾರರು ಸ್ವತಃ ತಮ್ಮ ಕಡತ ಯಾವ ಹಂತದಲ್ಲಿ ಇರುತ್ತದೆ ಎಂಬುದನ್ನು ಸದರಿ ತಂತ್ರಾಂಶದ ಮುಖಾಂತರ ವೀಕ್ಷಿಸಬಹುದಾಗಿರುತ್ತದೆ.
ಈ ಸಂಬಂಧ ಜುಲೈ 1 ರಿಂದ ಪೊನ್ನಂಪೇಟೆ ತಾಲ್ಲೂಕು ಶ್ರೀಮಂಗಲ ಹೋಬಳಿ ನಾಢಕಛೇರಿಯಲ್ಲಿ ಪ್ರಾಯೋಗಿಕವಾಗಿ ತಂತ್ರಾಂಶವನ್ನು ಚಾಲನೆ ನೀಡಲಾಗುತ್ತದೆ.
3.ಕಾಡುಹಂದಿ ದಾಂಧಲೆ

ಜಿಲ್ಲೆಯಲ್ಲಿ ಕಾಡಾನೆ,ಹುಲಿ ಒಂದೆಡೆಯಾದರೆ ಇದೀಗ ಕಾಡು ಹಂದಿಗಳ ಸರದಿ.ಇದೀಗತಾನೆ ಮಳೆ ಚುರುಕುಗೊಂಡು ಭತ್ತದ ಕೃಷಿ ಚಟುವಟಿಕೆ ಆರಂಭವಾಗುತ್ತಿದ್ದಂತೆ,ಪೈರು ಸಿದ್ದಗೊಳಿಸಲು ಬಿತ್ತನೆ ಬೀಜ ಹಾಕಿದ್ದರೆ,ಅವುಗಳನ್ನು ಸಂಪೂರ್ಣ ನಾಶ ಮಾಡಿರುವ ಘಟನೆ ಕದನೂರಿನಲ್ಲಿ ನಡೆದಿದೆ.
4.ಅಧಿಕಾರ ಸ್ವೀಕಾರ

ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಕಾರ್ಯದರ್ಶಿಯಾಗಿ ತೀತಿರ ಧರ್ಮಜ ಉತ್ತಪ್ಪ ಮಡಿಕೇರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ ಮಂಜುನಾಥ್,ಎಂಎಲ್ಸಿ ವೀಣಾ ಅಚ್ಚಯ್ಯ,ಮಾಜಿ ಸಚಿವ ಎಂ.ಸಿ ನಾಣಯ್ಯ,ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ,ಕೆಪಿಸಿಸಿ ಪ್ರಮುಖರಾದ ಟಿ.ಪಿ ರಮೇವ್,ಚಂದ್ರಕಲಾ ಮುಂತಾದ ಪ್ರಮುಖ ಮುಖಝಡರು ಹಾಜರಿದ್ದರು.
5.ಮತದಾರರ ಪಟ್ಟಿ ಪ್ರಕಟ

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ 2021ಕ್ಕೆ ಸಂಬಂದಿಸಿದಂತೆ ಮಡಿಕೇರಿ ತಾಲೂಕಿನ ಅಂತಿಮ ಮತದಾರರ ಪಟ್ಟಿಯನ್ನು ತಾಲ್ಲೂಕು ಕಚೇರಿಯ ಹಾಗೂ ನಾಡ ಕಚೇರಿಯ ಸೂಚನಾ ಫಲಕದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.
6.ಗಿರಿಜನರ ಪರೀಕ್ಷೆ ಚುರುಕು

ಕೋವಿಡ್ ಸಂದರ್ಭದಲ್ಲಿ ಗುಡ್ಡೆಹೊಸೂರಿನ ಬಸವನಳ್ಳಿಯಲ್ಲಿರುವ ದಿಡ್ಡಳ್ಳಿ ಬುಡಕಟ್ಟು ಜನಾಂಗದ ಪುನರ್ವಸತಿ ಕಾಲೋನಿಯಲ್ಲಿ ಲಸಿಕೆ ಮತ್ತು ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದವರಿಗೆ ಆರೋಗ್ಯ ಇಲಾಖೆ ಪಟ್ಟುಹಿಡಿದು ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು,ಗ್ರಾಮ ಪಂಚಾಯ್ತಿ ಸಹಯೋಗದೊಂದಿಗೆ ವಾಸಿಗಳಿಗೆ ಪರೀಕ್ಷೆ ಮಾಡಲಾಯಿತು.
7.ಭತ್ತದ ಬೀಜ ವಿತರಣೆ

ಭತ್ತದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಪರಿಶಿಷ್ಟ ಪಂಗಡದ ಆದಿವಾಸಿಗಳಿಗೆ ಕೃಷಿ ಪ್ರೋತ್ಸಾಹಿಸುವ ನಿಟ್ಟಿಲ್ಲಿ ಅಮ್ಮತ್ತಿಯ ರೈತ ಸಂಪರ್ಕ ಕೇಂದ್ರದಲ್ಲಿ ಭತ್ತದ ಬೀಜ ಮತ್ತು ಮಳೆಗಾಲಕ್ಕೆ ಅಗತ್ಯ ತಾರ್ಪಲ್ ವಿತರಿಸಲಾಯಿತು.
8.ಉಪಕರಣಗಳ ಹಸ್ತಾಂತರ

ಕೃಷಿ ಇಲಾಖೆಯ ಕೃಷಿ ಯಂತ್ರೋಪಕರಣ ಉಪ ಯೋಜನೆ ಅಡಿಯಲ್ಲಿ ಜಿಲ್ಲೆಯ ವಿವಿಧ ಒಕ್ಕೂಟಗಳಿಗೆ ಟ್ರಾಕ್ಟರ್ ಮತ್ತು ಇತರೆ ಉಪಕರಣಗಳನ್ನು ಹಸ್ತಾಂತರಿಸಲಾಯಿತು. ಮಡಿಕೇರಿ ತಾಲ್ಲೂಕಿನ ಪಾರಾಣೆ ಮತ್ತು ಮರಗೋಡು,ವಿರಾಜಪೇಟೆ ತಾಲ್ಲೂಕಿನ ಆರ್ಜಿ ಮತ್ತು ಕಾರ್ಮಾಡು ಈ ಸವಲತ್ತುಗಳು ಪಡೆದುಕೊಂಡರು.

9.ಕಾಳಿಂಗ ಸೆರೆ
ಮೂರ್ನಾಡುವಿನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಸೆರೆಯಾಗಿದೆ.ಇಲ್ಲಿನ ನಾರಾಯಣ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ 15 ಅಡಿ ಉದ್ದ,ಆರೂವರೆ ಕೆಜಿ ತೂಕದ ಕಾಳಿಂಗ ಸರ್ಪವನ್ನು ಕರಿಕೆಯ ಅರಣ್ಯ ವೀಕ್ಷಕರಾಗಿರುವ ಚಂದ್ರಶೇಖರ್ ಮತ್ತು ಸ್ಥಳೀಯ ಉರಗ ಪ್ರೇಮಿ ಪ್ರಜ್ವಲ್ ಸೇರಿ ಕಾಳಿಂಗವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.
10.ಕ್ರೀಡಾ ಸಚಿವರ ಪ್ರವಾಸ

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗು ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಕಿಕ ಸಚಿವ ಡಾ.ನಾರಾಯಣಗೌಡ ಜುಲೈ ಒಂದರಂದು ಕೊಡಗು ಪ್ರವಾಸ ಕೈಗೊಂಡಿದ್ದು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಇತ್ತು ಇತರೆ ಅನುಧಾನಡಳ ಕುರಿತು ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
11.ಸೀಲ್ಡೌನ್

ನರಿಯಂದಡ ಗ್ರಾಮಪಂಚಾಯ್ತಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಈಗಾಗಲೇ ಬಹುತೇಕ ಕಡೆ ಸೀಲ್ಡೌನ್ ಆಗಿದ್ದು,ಗ್ರಾಮದ ಅಂಬಾಡಿ ಪೈಸಾರಿಯಲ್ಲೂ ಸೋಂಕಿತರು ಹೆಚ್ಚಾಗಿರುವುದರಿಂದ ಸೀಲ್ಡೌನ್ ಮಾಡಲಾಗಿದ್ದು,ಇಲ್ಲಿನ ವಾಸಿಗಳಿಗೆ ಆಹಾರ ಕಿಟ್ ನೀಡಲಾಯಿತು.
12.ಅರಣ್ಯಾಭಿವೃದ್ದಿ

ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಕಾಡು ಗಿಡಗಳ ಸಸಿಗಳನ್ನು ನೆಡಲಾಯಿತು.