fbpx

ಕೊಡಗು Dist roundups

1.ಗ್ರಾ.ಪಂ ಸದಸ್ಯನ ವಿರುದ್ದು ಅತ್ಯಾಚಾರ ಪ್ರಕರಣ ದಾಖಲು

ಗೋಣಿಕೊಪ್ಪದ ಗ್ರಾಮ ಪಂಚಿಯ್ತಿ ಸದಸ್ಯ ಕುಲ್ಲಚಂಡ ಗಣಪತಿ ಎಂಬುವವರ ಮೇಲೆ ಅತ್ಯಾಚಾರ,ಕೊಲೆ ಬೆದರಿಕೆ ಮತ್ತು ಜಾತಿ ನಿಂದನೆಗೆ ಸೇರೀದಂತೆ ಗೋಣಿಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಲ್ಲಿನ ಹರಿಶಾಚಂದ್ರಪುರದ ವಸಂತಮ್ಮರಿಗೆ ಸೇರಿದ ಸ್ಥಳದಲ್ಲಿ ಕಾರ್ ಶೆಡ್ ತೆರವುಗೊಳಿಸಲು ತಿಳಿಸಿದ ವೇಳೆ ವಸಂತಮ್ಮರ ಪುತ್ರಿ ಮೇಲೆ ಅತ್ಯಾಚಾರ ಯತ್ನ ,ಜಾತಿನಿಂದನೆ ಮಾಡಿದ್ದಾರೆ ಎನ್ನುವ ಆರೋಪದಡಿ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ.ಇದೀಗ ಆರೋಪಿತ ಗಣಪತಿ ನಾಪತ್ತೆಯಾಗಿದ್ದು ಪೋಲಿಸರು ಶೋಧ ನಡೆಸುತ್ತಿದ್ದಾರೆ.

2.ಅಪಾಯದಂಚಿನ ಪ್ರದೇಶಕ್ಕೆ ಅಶೋಕ್ ಭೇಟಿ

ಮಡಿಕೇರಿ ಸುತ್ತಮುತ್ತಲಿನ ಅಪಾಯದಂಚಿನಲ್ಲಿರುವ ಪ್ರದೇಶಗಳಿಗೆ ಕಂದಾಯ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು,ಶಾಸದ್ವಯರು,ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಭೇಟಿ ನೀಡಿದ ಸಚಿವರು ಶೀಘ್ರವೇ ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ,ಅಗತ್ಯ ಸೌಕರ್ಯ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದರು.

3.ಅತ್ತ ಅವಮಾನ ಇತ್ತ ಸನ್ಮಾನ

ಕುಶಾಲನಗರವನ್ನು ತಾಲ್ಲೂಕು ಕೇಂದ್ರ ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ.ಈ ನಡುವೆ ಕುಶಾಲನಗರವನ್ನು ಕಾವೇರಿ ತಾಲ್ಲೂಕು ಎಂದು ಘೋಷಿಸುವಂತೆ ಹೋರಾಟ ಮಾಡಿದ್ದ,ಕುಶಾಲನಗರ ತಾಲ್ಲೂಕು ಹೋರಾಟ ಸಮಿತಿಯ ಅಧ್ಯಕ್ಷ ಕಾಂಗ್ರೆಸ್ ಮುಖಂಡ ವಿ.ಪಿ ಶಶಿಧರ್ ರನ್ನು ಉದ್ಗಾಟನಾ ಸಮಾರಂಭದಲ್ಲಿ ಗಣನೆಗೆ ತೆಗೆದುಕೊಂಡಿಲ್ಲ ಎನ್ನುವ ಕಾರಣಕ್ಕೆ ನಡೆದ ಹೈಡ್ರಾಮ ಬೆನ್ನಲ್ಲೇ ಬೈಚನಹಳ್ಳಿ ಗೆಳೆಯರ ಬಳಗದ ವತಿಯಿಂದ ಶಶಿಧರ್ ರವರಿಗೆ ಅಭಿನಂದನೆ ಸಲ್ಲಿಸಿದರು.

4.ನಿಸರ್ಗ ಟೂರಿಸ್ಟ್ ಸೆಂಟರ್ ಗೆ ನೋಟಿಸ್

ಕಾವೇರೀ ನದಿ ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಿ ವಾಣಿಜ್ಯೋಧ್ಯಮ,ಫನ್ ಗೇಮ್ ಮಾಡುವ ಮೂಲಕ ನದಿಯ ಒತ್ತುವರಿ ಮಾಡಿರುವ ಆರೋಪದ ಹಿನ್ನಲೆ ಜಿಲ್ಲೆ ಪ್ರವಾಸಿತಾಣದಲ್ಲೊಂದಾದ ಕಾವೇರಿ ನಿಸರ್ಗಧಾಮದ ಮುಂಬಾಗದಲ್ಲಿರುವ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮಾಲೀಕ ಸಲಾಂಗೆ ಅನುಮತಿ ನೀಡಿದ ಸ್ಥಳೀಯ ಪಂಚಾಯ್ತಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ.

5. ರೈತರಿಗೆ ಸಾಲ ವಿತರಣೆ

ಇಂದು ಡಿಸಿಸಿ ಬ್ಯಿಂಕ್ ಮತ್ತು ಕೃಷಿಪತ್ತಿನ ಸಹಕಾರ ಸಂಘಗಗಳ ಮೂಲಕ ಸಾಲದ ಪ್ರಯೋಜನ ಪಡೆಯುತ್ತಿರುವ ಜಿಲ್ಲೆಯ ಫಲಾನುಭವಿ ರೈತರಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಾಂಕೇತಿಕ ಸಾಲ ವಿತರಿಸಲಿದ್ದಾರೆ.

6. ಶೇ.50ರಷ್ಟು ಪ್ರವಾಸಿಗರು ತಂಗಲು ಅವಕಾಶ ನೀಡಲು ಮನವಿ

ಪ್ರವಾಸೋದ್ಯಮವನ್ನು ನಂಬಿ ಜೀವನ ನಡೆಸುತ್ತಿರುವ ಕೊಡಗಿನ ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಶೇಖಡ 50ರಷ್ಟು ಪ್ರವಾಸಿಗರು ತಂಗಲು ಅನುಮತಿ ನೀಡುವಂತೆ ರೆಸಾರ್ಟ್ ಮತ್ತು ಹೋಂಸ್ಟೇ ಮಾಲೀಕರು ಕಂದಾಯ ಸಚಿವ ಆರ್ ಅಶೋಕ್ ರಿಗೆ ಮನವಿ ಮಾಡಿದರು.

7.ಬೈಕ್ ಕಳ್ಳರ ಬಂಧನ

ನೆಲ್ಯುದಿಕೇರಿ ಸಮೀಪದ ಬೆಟ್ಟದ ಕಾಡುವಿನ ಮೊಹಮದ್ ತಸ್ಸೀರ್ ಎಂಬುವವರ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಕಂಬಿಲ್ ನಿವಾಸಿ ನಿಶಾದ್ ಮತ್ತು ಪಾಪಿಂಚೇರಿಯ ಮೋಹಮದ್ ಅಫ್ರಿದಿಯನ್ನು ಮಾಲ್ದಾರೆ ಚಕ್ ಪೋಸ್ಟ್ ಬಳಿ ಸಿದ್ದಾಪುರ ಪೋಲಿಸರು ಬಂಧಿಸಿ ಬೈಕನ್ನು ವಶಕ್ಕೆ ಪಡೆಯಲಾಗಿದೆ.

8.ಜನಸಂಘದ ಜನಕನ ಜನ್ಮದಿನಾಚರಣೆ

ಭಾರತೀಯ ಜನಸಂಘದ ಸ್ಥಾಪಕ ಶ್ಯಾಮ್ ಪ್ರಕಾಶ್ ಮುಖರ್ಜಿಯವರ ಜನ್ಮ‌ದಿನದ ಪ್ರಯುಕ್ತ ನೆಲ್ಯಹುದಿಕೇರಿ ಬಿಜೆಪಿ ಯುವಮೊರ್ಚಾ
ಹಾಗೂ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವೃಕ್ಷಾರೋಹಣ ಕಾರ್ಯಕ್ರಮ ನೆಲ್ಯಹುದಿಕೇರಿಯ ಶ್ರೀ ಸತ್ಯ ನಾರಾಯಣ ದೇವಸ್ಥಾನದಲ್ಲಿ‌ ನೆರವೇರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಭಾರತಾಂಬೆ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಸಲ್ಲಿಸಿ ವೃಕ್ಷಾರೋಹಣದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಕಲ್ಪ‌ ವೃಕ್ಷದ ಗಿಡಗಳನ್ನು ನೆಡಲಾಯಿತು.

9. ದಲೈ ಲಾಮಾರಿಗೆ 86ರ ವಸಂತ

ಟಿಬೇಟಿಯನ್ ಧರ್ಮಗುರು ದಲೈ ವಾಮಾ ತಮ್ಮ 86ನೇ ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿದ್ದು,ದೇಶದ ಎಲ್ಲಾ ಟಿಬೇಟಿಯನ್ ನಿರಾಶ್ರಿತರ ಕೇಂದ್ರದಲ್ಲಿ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ. ಕೊಡಗು ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮೂಲಕ ಶುಭಾಷಯ ಕೋರಿದ್ದಾರೆ.

error: Content is protected !!