ಕೊಡಗು ಹೆಗ್ಗಡೆ ಸಮಾಜದ ಮಹಾಸಭೆ ಮತ್ತು ಕ್ರೀಡೋತ್ಸವಕ್ಕೆ ದಿನಾಂಕ ನಿಗದಿ

ಕೊಡಗು ಹೆಗ್ಗಡೆ ಸಮಾಜದ ಮಹಾಸಭೆಯನ್ನು ದಿನಾಂಕ 10ನೇ ಎಫ್ರೇಲ್ ಬಾನುವಾರ ಬೆಳಿಗ್ಗೆ 10ಗಂಟೆಗೆ ಬಿಟ್ಟಂ ಗಾಲ ಹೆಗ್ಗಡೆ ಸಮಾಜದ ಲ್ಲಿ ನಡೆಸಲು ಅಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಯಿತು ನಂತರ ಕೊಡಗು ಹೆಗ್ಗಡೆ ಜನಾಂಗದ ಕ್ರೀಡೋತ್ಸವ ಸಮಿತಿಯು ಸಭೆ ಸೇರಿ ಕೊಡಗು ಹೆಗ್ಗಡೆ ಜನಾಂದವರಲ್ಲಿ ದೇಶಭಿಮಾನ ಮೂಡಿಸಿ ಜನಾಂಗದ ಬಾಂದವರಲ್ಲಿ ಸಾಮರಸ್ಯ ವನ್ನು ಬೆಳೆಸಿ ಕ್ರೀಡಾ ಮನೋಭಾವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಕ್ರೀಡಾ ಪ್ರತಿಭೆಯನ್ನು ಗುರುತಿಸಲು ಮೇ ತಿಂಗಳ1ರಿಂದ 4ನೇ ತಾರೀಖಿನೋರಗೆ ಮೂರ್ನಾಡು ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕ್ರಿಡೋತ್ಸವ ಸಮಿತಿ ಅಧ್ಯಕ್ಷರಾದ ಪಡಿಞರಂಡ ಪ್ರಭುಕುಮಾರ್ ನೇತೃತ್ವದಲ್ಲಿ ಕ್ರೀಡೋತ್ಸವವನ್ನು ನಡೆಸಲು ತೀರ್ಮಾನಿಸಲಾಯಿತು. 9ವಲಯಗಳಿಂದ ಕ್ರಿಕೆಟ್ ಸೀನಿಯರ್ ಪುರುಷರ 26ತಂಡಗಳು, ಕ್ರಿಕೆಟ್ ಬಾಲಕರ 8ತಂಡಗಳು, ಮಹಿಳಾ ವಿಭಾಗದ ಥ್ರೋಬಾಲ್ ಗೆ 9 ತಂಡಗಳು ಬಾಗವಹಿಸುವ ನಿರೀಕ್ಷೆ ಇದ್ದು, ಎಪ್ರಿಲ್ 20ರೊಳಗೆ ತಂಡ ನೋಂದಣಿಗೆ ಅವಕಾಶ ನೀಡಲಾಗಿದೆ, ಸಭೆಯ ಅಧ್ಯಕ್ಷತೆಯನ್ನು ಪಡಿಞರಂಡ ಅಯ್ಯಪ್ಪ,ವಹಿಸಿದ್ದರು ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾವೇರಪ್ಪ, ಉಪಾಧ್ಯಕ್ಷ ಕೊರಕುಟ್ಟಿರ ಸರಾಚಂಗಪ್ಪ, ಖಜಾಂಚಿ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕರಾದ ತೋರೇರ ಮುದ್ದಯ್ಯ, ಚರಿಮಂಡ ಪೂವಯ್ಯ, ಕೊಂಗೆಪಂಡ ರವಿ, ತಂಬಂಡ ಮಂಜು, ಮೂರೀರ ಕುಶಾಲಪ್ಪ, ಕೊಪ್ಪಡ ಪಳಂಗಪ್ಪ, ಪಂದಿಕಂಡ ಸುನಾ, ಅರುಣ್ ಹಾಗೂ 9ವಲಯಗಳ ಸಂಚಾಲಕರು ಹಾಜರಿದ್ದರು.