fbpx

ಕೊಡಗು ಹೆಗ್ಗಡೆ ಸಮಾಜದಲ್ಲಿಕಕ್ಕಡ18 ಒತ್ತರುಮೆ ಕೂಟ

ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದಲ್ಲಿ ಆಡಳಿತ ಮಂಡಳಿ ವತಿಯಿಂದ ಕಕ್ಕಡ 18ರಒತ್ತರುಮೆ ಕೂಟವನ್ನು ನಡೆಸಲಾಯಿತು. ಕಕ್ಕಡ ಖಾದ್ಯಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಇದಕ್ಕೂ ಪೂರ್ವದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಡಗು ಹೆಗ್ಗಡೆ ಸಾಮಾಜದ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪ ಮಾತನಾಡಿ ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಕಕ್ಕಡ ಮಾಸದಲ್ಲಿ ಅಧಿಕ ಮಳೆಯಾಗುತ್ತದೆ ಮಳೆಯ ಮಧ್ಯೆಯೂ ನಮ್ಮ ಹಿರಿಯರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಅದರೆ ಇತ್ತಿಚಿನ ದಿನಗಳಲ್ಲಿ ಕೆಲವು ಕಡೆ ಭತ್ತದ ಗದ್ದೆಗಳನ್ನು ಪಾಳು ಬಿಡಲಾಗುತ್ತಿರುವುದು ಬೇಸರದ ಸಂಗತಿ ಈ ನಿಟ್ಟಿನಲ್ಲಿ ಸಮಾಜದ ವತಿಯಿಂದ ನಮ್ಮ ಗತ ವೈಭವವನ್ನು ನೆನಪಿಸುವ ಕಾರ್ಯ ನಡೆಸಲಾಗುತ್ತಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು ನಂತರ ಮಾತನಾಡಿದ ಸಮಾಜದ ಉಪಾಧ್ಯಕ್ಷರಾದ ಕೊರಕುಟ್ಟೀರ ಸರಚಂಗಪ್ದ ವ್ಯಾಟ್ಸಾಪ್ ಫೇಸ್ ಬುಕ್ ಬಳಕೆಗೆ ಕೊಂಚ ವಿರಾಮವನ್ನು ನೀಡಿ ಕೃಷಿ ಚಟುವಟಿಕೆಯಲ್ಲಿ ಮತ್ತು ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಂಡು ಹೋಗಲು ಸಮಯನ್ನು ಮೀಸಲಿಡುವ ಅನಿವಾರ್ಯತೆಯಿದ್ದು, ಇತ್ತೀಚಿನ ದಿನಮಾನಳಲ್ಲಿ ಈ ತಂತ್ರಜ್ಞಾನ ಮುಖೇನ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

ಆಡಳಿತ ಮಂಡಳಿ ನಿರ್ದೇಶಕರಾದ ಪಡಿಞರಂಡ ಪ್ರಭು ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಭಾಗವಹಿಸಿದವರಿಗೆ ಸಾಮೂಹಿಕ ಕಕ್ಕಡ ಖಾದ್ಯಗಳ ಭೋಜನ ವ್ಯವಸ್ಥೆ ಮಾಡಲಾಗಿತ್ತು ಕೊಡಗು ಹೆಗ್ಗಡೆ ಸಮಾಜದ ಖಾಚಾಂಚಿ ಪಾನಿಕುಟ್ಟೀರ ರಾಧಕುಟ್ಟಪ್ಪ, ನಿರ್ದೇಶಕರಾದ ಕೊಪ್ಪಡ ಪಟ್ಟುಪಳಂಗಪ್ಪ, ಚರ್ಮಂಡ ಅಪ್ಪುಣು ಪೂವಯ್ಯ, ಮೂರೀರ ಕುಶಾಲಪ್ಪ,
ತಂಬಂಡ ಮಂಜು,ಕೊಂಗೆಪ್ಪಂಡ ರವಿ, ಪಂದಿಕಂಡ ಸುನಾ, ಚಳಿಯಂಡ ಕಮಲಾ ಉತ್ತಯ್ಯ, ಮಲ್ಲಾಡ ಸುತಾ, ಮೂರೀರ ಶಾಂತಿ ಮತ್ತಿತರರು ಹಾಜರಿದ್ದರು.

error: Content is protected !!