ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ನಗರಸಭೆ ನೂತನ ಆಯುಕ್ತರ ಭೇಟಿ

ಮಡಿಕೇರಿ: ಕೊಡಗು ಹಿತರಕ್ಷಣಾ ವೇದಿಕೆವತಿಯಿಂದ ಇಂದು ಮಡಿಕೇರಿ ನಗರಸಭೆಯ ಆಯುಕ್ತರಾದ ವಿಜಯ್ ಅವರನ್ನು ವೇದಿಕೆ ಸದ್ಯಸರು ಭೇಟಿ ಮಾಡಿದರು ಮಡಿಕೇರಿ ನಗರ ಸಭೆಯ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅವರಿಗೆ ವೇದಿಕೆ ವತಿಯಿಂದ ಹೂಗುಚ್ಚ ನೀಡಿ ಅಭಿನಂದಿಸಲಾಯಿತು ಹಾಗೂ ಕಚೇರಿಯಲ್ಲಿ ಕಡತಗಳು ವಿಲೇವಾರಿ ಆಗದ ಬಗ್ಗೆ ವೇದಿಕೆ ವತಿಯಿಂದ ಆಯುಕ್ತರ ಗಮನಕ್ಕೆ ತರಲಾಯಿತು.
ಅದರ ಬಗ್ಗೆ ಪ್ರತಿಕ್ರಿಯೆ ನೀಡಿದ ಆಯುಕ್ತರು ಇದಾಗಲೇ ಅಧಿಕಾರಿಗಳ ಸಭೆ ಕರೆದಿದ್ದು, ಆದಷ್ಟು ಬೇಗ ಕಡತಗಳನ್ನು ವಿಲೇವಾರಿ ಮಾಡುವಂತೆ ಆದೇಶ ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದರು. ಮಡಿಕೇರಿ ನಗರದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವಂತೆ ವೇದಿಕೆಯ ವತಿಯಿಂದ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ರವಿಗೌಡ, ಕಾರ್ಯದರ್ಶಿ ಮೀನಾಜ್ ಪ್ರವೀಣ್, ಮಡಿಕೇರಿ ತಾಲೂಕು ಅಧ್ಯಕ್ಷರಾದ ನಾಗೇಶ್, ಉಪ ಕಾರ್ಯದರ್ಶಿಯಾದ ಪವಿತ್ರ.ರೈ, ತಾಲೂಕು ಉಪಕಾರ್ಯದರ್ಶಿ ಅಕ್ಷಿತ್, ನಗರ ಅಧ್ಯಕ್ಷರಾದ ಭರತ್ ಹಾಗೂ ಸದಸ್ಯರುಗಳಾದ ಕಿರಣ್, ಸೈಮನ್ ಹಾಜರಿದ್ದರು.