ಕೊಡಗು ರಕ್ಷಣಾ ವೇದಿಕೆಯ (ರಿ) ‘ನಮ್ಮವರಿಗಾಗಿ ನಾವು’ಅಭಿಯಾನ ಆರಂಭ

ಮಡಿಕೇರಿ: ಕೋವಿಡ್ ಆಸ್ಪತ್ರೆಯ ಮುಂಬಾಗದಲ್ಲಿ ವೆನ್ಲಾಕ್ ಮೆಡಿಕಲ್ಸ್ ಬಳಿ, ಕೊಡಗಿನ ವಿವಿಧ ಭಾಗಗಳಿಂದ ಕರೋನಾ ರೋಗಿಗಳನ್ನು ಕರೆದುಕೊಂಡು ಬರುವ ಅವರ ಸಂಬಂಧಿಕರಿಗೆ ಮತ್ತು ಸ್ವಾಬ್ ಪರೀಕ್ಷೆಗೆ ಬರುವವರಿಗೆ ಕೊಡಗು ರಕ್ಷಣಾ ವೇದಿಕೆಯಿಂದ ಮಧ್ಯಾಹ್ನ ನಿತ್ಯ ಅನ್ನದಾನ ನೀಡುವ ಅಭಿಯಾನ ಪ್ರಾರಂಭಗೊಂಡಿದೆ.
ಲಾಕ್ ಡೌನ್ ನಿಂದ ಯಾವುದೇ ಕ್ಯಾಂಟೀನ್ ಹಾಗು ಹೋಟೆಲ್ ಇಲ್ಲದೆ ರೋಗಿಗಳ ಸಂಬಂಧಿಕರು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಪ್ರಾರಂಭಗೊಂಡಿರುವ ಈ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.