ಕೊಡಗು ಯುವಸೇನೆಯ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಬೈರೇಟಿರ ಅಜಿತ್ ಪೂಣಚ್ಚ ಅವರನ್ನು ನೇಮಕ ಮಾಡಲಾಗಿದೆ.ಸಾಮಾಜಿಕ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ, ದೇಶ ಹಾಗೂ ಧರ್ಮದ ಪರ ಕಾಳಜಿ ಹೊಂದಿರುವದನ್ನು ಪರಿಗಣಿಸಿ ನೇಮಕ ಮಾಡಲಾಗಿದೆ ಎಂದು ಯುವ ಸೇನೆಯ ಮುಖಂಡರಾದ ಕುಲದೀಪ ಪೂಣಚ್ಚ ಹಾಗೂ ಜಿಲ್ಲಾ ಸಂಚಾಲಕರಾದ ಮಾಚೆಟ್ಟಿರ ಸಚಿನ್ ಮಂದಣ್ಣ ತಿಳಿಸಿದ್ದಾರೆ.