ಕೊಡಗು ಯುವಸೇನೆಗೆ ಜಿಲ್ಲಾ ಸಹಸಂಚಾಲಕರುಗಳ ನೇಮಕ


ಕೊಡಗು ಯುವ ಸೇನೆಯ ಜಿಲ್ಲಾ ಸಹಸಂಚಾಲಕರುಗಳಾಗಿ ಗುಡ್ಲೂರುವಿನ ಕುಯ್ಯಮುಡಿ ರತನ್ ಬೆಳ್ಳಿಯಪ್ಪ ಹಾಗೂ ಪೊನ್ನಪ್ಪಸಂತೆಯ ಚೆಪ್ಪುಡಿರ ಚೇತನ್ ಪೊನ್ನಪ್ಪ ಅವರುಗಳನ್ನು ನೇಮಕ ಮಾಡಲಾಗಿದೆ.
ಯುವ ಸೇನೆಯ ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ ಅವರ ಸೂಚನೆ ಮೇರೆಗೆ ಇವರು ಧರ್ಮ, ದೇಶ ಹಾಗೂ ಸಮಾಜಕ್ಕಾಗಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ನೇಮಕ ಮಾಡಲಾಗಿದೆ ಯುವ ಸೇನೆಯ ಸಂಸ್ಥಾಪಕ ಕುಲದೀಪ್ ಪುಣಚ ತಿಳಿಸಿದ್ದಾರೆ.