fbpx

ಕೊಡಗು ಮೂಲಕ ರೈಲು ಸಂಚಾರವಿಲ್ಲ:ರೈಲು ಮಾರ್ಗ ಬದಲಾಯಿಸಿದ ಕೇರಳ

ಕೊಡಗು: ಜಿಲ್ಲೆ ವಿರಾಜಪೇಟೆ ಗಡಿ ಕುಟ್ಟದ ಮೂಲಕ ಕೇರಳದ ತಲೆಚೆರಿ ಮತ್ತು ಮೈಸೂರಿನ ಕಡಕೊಳ ನಡುವಿನ ರೈಲು ಮಾರ್ಗವನ್ನು ಕೇರಳ ಸರ್ಕಾರ ಬದಲಾಯಿಸಿದ್ದು,ಕೊಡಗಿನ ಮೂಲಕ ರೈಲು ಸಂಚಾರಕ್ಕೆ ಬ್ರೇಕ್ ಬಿದ್ದಿದೆ.


ಕೊಂಕಣ್ ರೈಲು ಮಾರ್ಗದ ಮಾದರಿಯಲ್ಲಿ ಕರ್ನಾಟಕ,ಕೇರಳ ನಡುವೆ ರೈಲು ಸಂಚಾರಕ್ಕೆ ಕೇಂದ್ರಕ್ಕೆ ಪ್ರಸ್ಥಾವನೆ ಸಲ್ಲಿಕೆ ಮಾಡಿರುವ ಕೇರಳ ಸರ್ಕಾರ ರಾಜ್ಯದ ಗಡಿ ಕಡಕೊಳದಿಂದ ಹೊರಟು,ಹೆಚ್.ಡಿ ಕೋಟೆ,ಬಾವಲಿ ಮೂಲಕ ನಿರ್ಮಾಣವಾಗಲಿದ್ದು,ಇದರಲ್ಲಿ 22 ಕಿಲೋಮೀಟರ್ ಟನಲ್ ನಿರ್ಮಾಣ ನಗರ ಪ್ರದೇಶದಲ್ಲಿ ಸಹಜ ಮಾರ್ಗದಲ್ಲಿ ಸಂಚಾರ ಮಾಡಲು ನಿರ್ಧಾರ ಮಾಡಲಾಗಿದ್ದು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಕೆ ಮಾಡಲಾಗಿದೆ.ಇದಕ್ಕೆ ರಾಜ್ಯದ ಅರಣ್ಯ ಇಲಾಖೆಯಿಂದ ಅನುಮೋಧನೆ ಮಾತ್ರ ಬಾಕಿ ಉಳಿದಿದೆ.ರಾಜ್ಯದ ರೈಲ್ವೆ ಮಾರ್ಗದ ಸಲಹಸಮಿತಿ ತಂಡ ಈ ನೂತನ ಮಾರ್ಗದ ಬಗ್ಗೆ ಹೆಲಿಕಾಪ್ಟರ್ ಮೂಲಕ ಸರ್ವೆ ಕಾರ್ಯ ನಡೆಯಸಿರುವ ಬಗ್ಗೆ ರಾಜ್ಯದ ಸಮಿತಿ ಸಂಚಾಲಕ ಶಂಕರ್ ಕೆ ಮುತ್ತು ಸ್ಪಷ್ಟ ಪಡಿಸಿದ್ದು,ಈ ನೂತನ ಮಾರ್ಗ,ಬಂಡೀಪುರ,ಕಬಿನಿ ಹಿನ್ನೀರು,ನಾಗರಹೊಳೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದು.ಕೇರಳ ಸರ್ಕಾರದ ರೈಲ್ವೆ ಮಾರ್ಗದ ಸಲಹ ಸಮಿತಿ ಸಂಚಾಲಕ ಉಮೇಶ್ ಪೊಚ್ಚಪ್ಪನ್ ಈ ಪ್ರಸ್ಥಾವನೆಗೆ ಕರ್ನಾಟಕದ ಅನುಮತಿ ಮಾತ್ರ ಬಾಕಿ ಉಳಿದೆ ಎಂದು ತಿಳಿಸಿದ್ದಾರೆ.

error: Content is protected !!