fbpx

ಕೊಡಗು ಮೂಲಕ ದಕ್ಷಿಣ ಕನ್ನಡಕ್ಕೆ ತೆರಳಿದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮೇಗೌಡರ ಕಂಚಿನ ಪ್ರತಿಮೆ

ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ, ಸಮರವೀರ ಕೆದಂಬಾಡಿ ರಾಮೇಗೌಡ ಅವರ ಕಂಚಿನ ಪ್ರತಿಮೆ ಕೊಡಗಿಗೆ ಪ್ರವೇಶಿಸಿತ್ತು.

ಕುಶಾಲನಗರ ತಾಲ್ಲೂಕಿನ ಶಿರಂಗಾಲ ಗ್ರಾಮದ ಮೂಲಕ ತೆರೆದ ವಾಹನದಲ್ಲಿ ಪ್ರವೇಶ ಪಡೆದ ಪ್ರತಿಮೆಯನ್ನು ಕುಶಾಲನಗರ ತಾಲ್ಲೂಕು ಕೇಂದ್ರದ ಹೃದಯ ಭಾಗದಲ್ಲಿರುವ ಜನರಲ್ ತಿಮ್ಮಯ್ಯ ವೃತ್ತದಲ್ಲಿನ ಗಣಪತಿ ದೇವಾಲಯದಲ್ಲಿ ಸಾಂಪ್ರದಾಯಿಕ ಧಿರಿಸಿನಲ್ಲಿದ್ದ ಅರೆಭಾಷೆ ಗೌಡ ಜನಾಂಗದವರು, ಮಾಜಿ ಸೈನಿಕರು ಮತ್ತು ಸ್ಥಳೀಯರು ಪುಷ್ಪ ನಮನ ಸಲ್ಲಿಸಿದರು.

ಬಳಿಕ ಮಡಿಕೇರಿಗೆ ಆಗಮಿಸಿದ್ದ ಸಂದರ್ಭ ಸುದರ್ಶನ ವೃತ್ತದಲ್ಲಿ ಶಾಸಕ ಕೆ.ಜಿ ಬೋಪಯ್ಯ ಪುಷ್ಪನಮನ ಸಲ್ಲಿಸಿಸಿ ಸ್ವಾಗತಿಸಿದರು. ಪ್ರತಿಮೆಯನ್ನು ಮಂಗಳೂರಿನ ಸ್ವತಂತ್ರ ಹೋರಾಟದಲ್ಲಿ ಖ್ಯಾತಿ ಪಡೆದಿದ್ದ ಭಾವುಟ ಗುಡ್ಡದಲ್ಲಿ ಸ್ಥಾಪಿಸಲಾಗುವುದು.

error: Content is protected !!