fbpx

ಕೊಡಗು ಬೆಳೆಗಾರ ಒಕ್ಕೂಟದಿಂದ ಅಧಿಕಾರಿಗಳ ಭೇಟಿ-ಚರ್ಚೆ, ಮನವಿ ಸಲ್ಲಿಕೆ

ಭೂ ವಿಭಾಗಪತ್ರ ಸಂದರ್ಭ 11 ಇ ನಕ್ಷೆ ನೋಂದಣಿ ಮಾಡಲು 6 ತಿಂಗಳು ಸಮಯಾವಕಾಶ ಇದ್ದು,ಅವಧಿ ಮುಗಿದ ಕಡತಗಳಿಗೆ ಮತ್ತೆ ಸರ್ವೇ ನಂಬರ್ ಒಂದಕ್ಕೆ ರೂ.1000 ಶುಲ್ಕ ವಿಧಿಸುತ್ತಿರುವುದು ಸರಿಯಲ್ಲ,ಕೋವಿಡ್ -19 ಲಾಕ್ ಡೌನ್ ಹಿನ್ನಲೆ ಕಚೇರಿಯ ಕಾರ್ಯಚಟುವಟಿಕೆ,ಸಾರ್ವಜನಿಕ ಸಂಚಾರ ಸ್ಥಗಿತವಾದ ಹಿನ್ನಲೆ ಹೆಚ್ಚುವರಿ ಶುಲ್ಕ ವಿಧಿಸದೇ ನೋಂದಣಿಗೆ ಪರಿಗಣಿಸುವಂತೆ ಕೊಡಗು ಬೆಳೆಗಾರ ಒಕ್ಕೂಟದ ನಿಯೋಗದಿಂದ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಮತ್ತು ಭೂದಾಖಲೆಗಳ ಉಪನಿರ್ದೇಶಕರಾದ ಶ್ರೀನಿವಾಸ್ ಅವರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಿದರು.

ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಅವರ ನೇತೃತ್ವದಲ್ಲಿ 11 ಇ ನಕ್ಷೆ ಮಾಡಲು ಪ್ರತಿ ಸರ್ವೇ ನಂಬರ್ ಗೆ ತಲಾ ರೂ.1000 ಇಲಾಖೆಗೆ ಶುಲ್ಕ ಪಾವತಿಸಲಾಗುತ್ತದೆ.ಅವಧಿ ಮೀರಿದ ಕಡತಗಳಿಗೆ ಮತ್ತೆ ಹೊಸದಾಗಿ ಶುಲ್ಕ ಪಾವತಿಸಲು ಇಲಾಖೆ ಕ್ರಮದಿಂದ ಬೆಳೆಗಾರರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ರಿಯಾಯಿತಿ ನೀಡಿ,ಅವಧಿ ಮೀರಿದ ಕಡತಗಳನ್ನು ಈಗಾಗಲೇ ಪಾವತಿಸಿದ ಶುಲ್ಕದೊಂದಿಗೆ ಪ್ರಕ್ರೀಯೆ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ಅವಧಿ ಮೀರಿದ ಕಡತಗಳಿಗೆ ಮತ್ತೆ 2 ತಿಂಗಳು ವಿಸ್ತರಿಸಿ ರಿಯಾಯಿತಿ ನೀಡಲಾಗುವುದೆಂದು ಉಪನಿರ್ದೇಶಕರಾದ ಶ್ರೀನಿವಾಸ್ ಅವರು ಭರವಸೆ ನೀಡಿದರು.

ಇದಲ್ಲದೇ,ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿ ಎಸ್ ಸಿದ್ದೇಶ್ ಅವರನ್ನು ಭೇಟಿ ಮಾಡಿದ ನಿಯೋಗ ಬೆಳೆಗಾರರು ಬ್ಯಾಂಕ್ ನಿಂದ ಸಾಲ ಪಡೆಯುವಾಗ ನೋಂದಣಿ ಕಚೇರಿಯಲ್ಲಿ ಇಬ್ಬರು ಸಾಕ್ಷಿದಾರರನ್ನು ಕೇಳುವುದ್ದಕ್ಕೆ ಆಕ್ಷೇಪಣೆ ಇಲ್ಲ. ಆದರೇ ಸಾಲ ಮುಗಿದ ನಂತರ ಬ್ಯಾಂಕ್ ನಿಂದಲೇ ನೋಂದಣಿ ರದ್ಧತಿಗೆ ಪತ್ರ ನೀಡಿರುವಾಗ,ರದ್ಧತಿ ಸಂದರ್ಭ ಇಬ್ಬರು ಸಾಕ್ಷಿದಾರರನ್ನು ಕೇಳುವ ಕ್ರಮ ಕೈಬಿಡಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಕಂದಾಯ ಇಲಾಖೆ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ, ಬೆಳೆಗಾರ ಒಕ್ಕೂಟದ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸುವ ಭರವಸೆ ನೀಡಿದರು.

ಈ ಸಂದರ್ಭ ಒಕ್ಕೂಟದ ಪ್ರ.ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ,ಖಜಾಂಚಿ ಮಾಣೀರ ವಿಜಯ ನಂಜಪ್ಪ,ಸದಸ್ಯರಾದ ಆಶಾ ಜೇಮ್ಸ್,ಚೆಂದಿರ ಸುಮಿತ ಅಪ್ಪಣ್ಣ,ಕೋಳೆರ ಭಾರತಿ,ಅಚ್ಚೆ ಯಂಡ ವೇದಿತ್ ಮುತ್ತಪ್ಪ ಹಾಜರಿದ್ದರು.

error: Content is protected !!