ಕೊಡಗು ಡಿ.ಎಸ್.ಎಸ್ ಗ್ರಾಮಕ್ಕೆ ಭೇಟಿ ಹಾಗು ಕಿಟ್ ವಿತರಣೆ

ಮಡಿಕೇರಿ: ಬಾವಲಿ ಗ್ರಾಮದ ಬಿದ್ದಂಡ ಕಾಲೋನಿಗೆ ಡಿ ಎಸ್ ಎಸ್ ವತಿಯಿಂದ ಭೇಟಿ‌ ನೀಡಿ, ಅಲ್ಲಿನ ಬಡಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ದಿವಾಕರ್ ಹೆಚ್ ಎಲ್ ಅವರು ‘ಕಳೆದ ವರ್ಷ ಲಾಕ್ಡೌನ್ ಸಂಧರ್ಭದಲ್ಲಿ ಸುಮಾರು 1000 ಕಿಟ್ಗಳನ್ನು ಜಿಲ್ಲೆಯಾದ್ಯಂತ ಸಂಘಟನೆ ವಿತರಿಸಿದ್ದು, ಈ ವರ್ಷವೂ ಕಿಟ್ ವಿತರಣೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಂಘಟನೆ ನೆರವಿಗೆ ಬರಲಿದೆ.’ ಎಂದರು.

ಮಡಿಕೇರಿ ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ ‘ನಮ್ಮ ಸಂಘಟನೆ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತನ್ನು ಕೊಟ್ಟಿದೆ. ಆದರೆ ಪ್ರಸ್ತುತ ನೆರೆ, ಪ್ರವಾಹ ಮತ್ತು ಕೋವಿಡ್ ಸಮಸ್ಯೆ ಜಿಲ್ಲೆಯನ್ನು ಭಾದಿಸುತ್ತಿದ್ದು ಆಹಾರ ಕಿಟ್ ವಿತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ’ ಎಂದರು. ಸಂಘಟನೆಯ ಪ್ರಮುಖರು ಹಾಜರಿದ್ದರು.

error: Content is protected !!