|ಕೊಡಗು ಜಿಲ್ಲೆಯಾದ್ಯಂತ ಮಳೆ ಅವಾಂತರ|ತ್ರಿವೇಣಿ ಸಂಗಮ ಭರ್ತಿ| ಮನೆಗಳಿಗೆ ನುಗ್ಗಿದ ನೀರು |

ಕೊಡಗು ಜಿಲ್ಲೆಯಾದ್ಯಂತ ನಿರಂತರ ಸುರಿದ ಮಳೆಗೆ ಭಾಗಮಂಡಲ ನಾಪೋಕ್ಲೂ ಮತ್ತು ಮಡಿಕೇರಿ ರಸ್ತೆ ಸಂಚಾರ ಕಡಿತಗೊಂಡಿದ್ದು ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಭಗಂಡೇಶ್ವರ ದೇವಾಲಯದ ಎದುರಿನ ಮೆಟ್ಟಿಲು ಮತ್ತು ಒಳಾಂಗಣ ಆವರಣದಲ್ಲಿ ನೀರು ತುಂಬಿಕೊಂಡಿದೆ.


ಭಾಗಮಂಡಲದಿಂದ ಕರಿಕೆ ತೆರಳುವ ಮಾರ್ಗದಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಂಪಾಜೆ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ, ಜಲಪ್ರಳಯದ ಅನುಭವವಾಗಿದ್ದು, ಕೊಯನಾಡು ಕಿಂಡಿ ಅಣೆಕಟ್ಟು ಮತ್ತೆ ಪ್ರವಾಹ ಭೀತಿ ಎದುರಿಸಿದ್ದು 30 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಸ್ವಲ್ಪ ದಿನ ತಗ್ಗಿದ್ದ ಮಳೆಯಿಂದ ಕಡಿಮೆಯಾಗಿದ್ದ ಕಾವೇರಿ ನದಿ ನೀರಿನ ಹರಿವು ಇದೀಗ ಮತ್ತೆ ಏರಿಕೆ ಕಾಣುತ್ತಿದೆ.