ಕೊಡಗು ಜಿಲ್ಲೆಯಲ್ಲಿ ಗೋಹತ್ಯೆ ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲ: ಗೋ ಹಂತಕರ ವಿರುದ್ಧ ಕ್ರಮಕ್ಕೆ ಹಿಂದು ಜಾಗರಣ ವೇದಿಕೆ ಒತ್ತಾಯ

ಕೊಡಗು ಜಿಲ್ಲೆಯಲ್ಲಿ ನಿರಾತಂಕವಾಗಿ ನಡೆಯುತ್ತಿರುವ ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಗೋಹತ್ಯೆಯಂತಹ ಕಾನೂನುಬಾಹಿರ ಕೃತ್ಯಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಲಾಗದ ಜಿಲ್ಲಾಡಳಿತದ ಬೇಜವಾಬ್ದಾರಿತನದಿಂದಾಗಿ ಸಮಾಜದಲ್ಲಿ ಸಂಘರ್ಷಗಳು ನಡೆಯುವಂತಹ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ನಿರಾತಂಕವಾಗಿ ಗೋವುಗಳ ಕಳ್ಳತನ, ಅಕ್ರಮ ಗೋಸಾಗಾಟ, ಗೋಮಾಂಸ ಮಾರಾಟ, ಗೋಹತ್ಯೆ ಪ್ರಕರಣಗಳು ನಡೆಯುತ್ತಲೇ ಇದ್ದರೂ ಸೂಕ್ಷ್ಮ ಪ್ರದೇಶಗಳ ಕಣ್ಗಾವಲಿಗಾಗಿ ಸಿ.ಸಿ. ಕ್ಯಾಮರಾ ಅಳವಡಿಸುವುದು,ರಾತ್ರಿ ಗಸ್ತು ಹೆಚ್ಚಿಸುವುದು,ಸೈಬರ್ ಕ್ರೈಂ ಮೂಲಕ ದುಷ್ಕರ್ಮಿಗಳ ಲಿಂಕ್ ಗಳನ್ನೂ ಕಂಡು ಹಿಡಿಯುವುದು, ಇಂಟೆಲಿಜೆನ್ಸ್ ಮತ್ತು ಗ್ರಾಮ ಬೀಟ್ ಸಿಬ್ಬಂದಿಗಳ ಮೂಲಕ ಕಾನೂನು ಬಾಹಿರ ಕೃತ್ಯ ನಡೆಸುವವರ ಮಾಹಿತಿಗಳನ್ನು ಕಲೆಹಾಕಿ ದುಷ್ಕರ್ಮಿಗಳನ್ನು ಬಂಧಿಸಲು ಸಾಧ್ಯವಿದ್ದರೂ ಸಹ ಅದಕ್ಕೆ ಪೂರಕವಾಗಿ ಇಲಾಖೆ ಕೆಲಸ ನಿರ್ವಹಿಸದೇ ಇರುವುದು ಸಾರ್ವಜನಿಕರ ಅನುಮಾನಗಳಿಗೆ ಕಾರಣವಾಗಿದೆ. ಹಿಂದು ಪರ ಸಂಘಟನೆಗಳ ಗಮನಕ್ಕೆ ಬರುವ ದುಷ್ಕೃತ್ಯಗಳು ಇಲಾಖೆಗಳ ಗಮನಕ್ಕೆ ಮಾತ್ರ ಬಾರದೇ ಇರುವುದು ಸಹ ಹಲವು ಸಂಶಯಗಳನ್ನು ಹುಟ್ಟು ಹಾಕುತ್ತಿವೆ ಈ ಬಗ್ಗೆ ಕ್ರಮ ಕೈಗೊಳ್ಳಲು ಹಿಂದು ಜಾಗರಣ ವೇದಿಕೆ ಒತ್ತಾಯಿಸಿದೆ.