ಕೊಡಗು ಜಿಲ್ಲಾ Quick RoundUp

 •   ಬಸ್ ಸಂಚಾರವಿಲ್ಲ: ಕೋವಿಡ್ 19ರ ಸೋಂಕಿತ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಸಡಿಲಗೊಳಿಸಿರುವ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಕ್ಯಾಟಗರಿ 2 ರ ಪಟ್ಟಿಯಲ್ಲಿರುವ ಕೊಡಗು ಜಿಲ್ಲೆಗೆ ಅವಶ್ಯವಿದ್ದಲಿ ಮಾತ್ರ ಬಸ್ ಸಂಚಾರ ಆರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ.
 • ನಕಲಿ ಫಲಾನುಭವಿಗಳು– ದಿಡ್ಡಳ್ಳಿಯ ನಿರಾಶ್ರಿತರಿಗೆ ಬ್ಯಾಡಗೊಟ್ಟದಲ1ಲಿ ನೀಡಲಾಗಿರುವ ಮನೆಗಳಲ್ಲಿ ನೈಜ ಫಲಾನುಭವಿಗಳು ಅಲ್ಲದೆ ಇತರರು ವಾಸಿಸುತ್ತಿದ್ದ ಹಿನ್ನಲೆ 100ಕ್ಕೂ ಹೆಚ್ಚು ಕುಟುಂಬಗಳಿಗೆ ಸಮಾಜ ಕಲ್ಯಾಣ ಇಲಾಖೆ ವಸತಿ ನಿಗಮ ಯೋಜನೆ ಇಲಾಖೆಗೆ ನೋಟಿಸ್ ನೀಡಿದೆ.
 • ಲಸಿಕಾ ಮೇಳ -ಜೂನ್, 21 ರಂದು “ಕೋವಿಡ್-19 ಲಸಿಕಾ ಮೇಳ”ವನ್ನು ಹಮ್ಮಿಕೊಳ್ಳಲಾಗಿದ್ದು, ಈ ದಿನದಂದು ವಿವಿಧ ಇಲಾಖೆಯ 18 ವರ್ಷ ಮೇಲ್ಪಟ್ಟ ಮುಂಚೂಣಿ ಕಾರ್ಯಕರ್ತರು ಹಾಗೂ ಆಧ್ಯತಾ ವಲಯದ ಅರ್ಹ ಫಲಾನುಭವಿಗಳಿಗೆ ಹಾಗೂ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕೋವಿಡ್ 19 ಲಸಿಕೆಯನ್ನು ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿಗದಿತ ಲಸಿಕಾ ಕೇಂದ್ರ ಹಾಗೂ ಆಯ್ದ ಉಪಕೇಂದ್ರಗಳಲ್ಲಿ ನೀಡಲಾಗುವುದು.
  18 ವರ್ಷ ಮೇಲ್ಪಟ್ಟ ಮುಂಚೂಣಿ ಕಾರ್ಯಕರ್ತರು ಹಾಗೂ ಆಧ್ಯತಾ ವಲಯದ ಅರ್ಹ ಫಲಾನುಭವಿಗಳಿಗೆ ಜಿಲ್ಲಾಧಿಕಾರಿಗಳಿಂದ ನಿಯೋಜಿಸಲಾಗಿರುವ ನೋಡಲ್ ಅಧಿಕಾರಿಗಳಿಂದ ನಮೂನೆ 3 ನ್ನು ಭರ್ತಿ ಮಾಡಿ ಲಸಿಕಾ ಕೇಂದ್ರದಿಂದ ಲಸಿಕೆಯನ್ನು ಪಡೆದುಕೊಳ್ಳುವಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋರಿದೆ.
 • ಸಿ.ಎಂಗೆ ಕಿತ್ತಳೆ ಬಯಕೆ – ಕೊಡಗಿನಲ್ಲಿ ಬೆಳೆಯುವ ಕಿತ್ತಳೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಗಮನ ಸೆಳೆದರು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊಡಗಿನ ಕಿತ್ತಳೆಯನ್ನು ತೆಗೆದುಕೊಂಡು ಬರುವಂತೆ ಹಾಸ್ಯ ಚಟಾಕಿ ಹಾರಿಸಿದರು.
 • ಹೊಸ ಯೋಜನೆ
  ಮಕ್ಕಳ ರಕ್ಷಣಾ ನಿರ್ದೇಶನಾಲಯ ವತಿಯಿಂದ ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬಾಧಿತ ಮಕ್ಕಳನ್ನು ಬೆಂಬಲಿಸಲು ಹೆಚ್ಚಿನ ಸಂದರ್ಭಗಳಲ್ಲಿ ಮಗುವಿಗೆ ಪಾಲನೆ ಮತ್ತು ರಕ್ಷಣೆಯನ್ನು ಒದಗಿಸಲು ವಿಸ್ತ್ರತ ಕುಟುಂಬ, ಏಕಪೋಷಕರ ನೆರವಿದ್ದರೂ ಸಹ ತಂದೆ/ ತಾಯಿಯರನ್ನು ಕಳೆದುಕೊಂಡ 18 ವರ್ಷದೊಳಗಿನ ಮಗುವನ್ನು ಮಾನಸಿಕ ಆಘಾತದಿಂದ ಹೊರತರಲು ಹಾಗೂ ಮಗುವಿನ ದೀರ್ಘಕಾಲಿಕ ಸಕಾರಾತ್ಮಕ ಬೆಳವಣಿಗೆಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅನುವಾಗುವಂತೆ “ಬಾಲ ಹಿತೈಷಿ” (ಮಾರ್ಗದರ್ಶಕತ್ವ/ಮೆಂಟರ್ಶಿಪ್) ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದೆ.
 • ಕಾಡಾನೆ ಹಾವಳಿ -ಅಯ್ಯಂಗೇರಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು,ಆಗಿಂದಾಗೆ ಲಗ್ಗೆ ಇಟ್ಟು ಇಲ್ಲಿನ ಕಾಫಿ ತೋಟದಲ್ಲಿ ಹಲವು ಬಾಳೆ,ಅಡಿಕೆ,ಕಾಫಿ ಹಣ್ಣಿನ ಗಿಡಗಳನ್ನು ನಾಶಪಡಿಸಿದೆ.
 • ಮಲ್ಲಳ್ಳಿ ಸೊಬಗು– ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಲಪಾತಗಳು ಮೈಧುಂಬಿ ಧುಮ್ಮಿಕುತ್ತಿವೆ.ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಶ್ರೇಣಿಯಲ್ಲಿ ಹರಿಯುವ ಕುಮಾರಧಾರಾ ನದಿಯ ಮಲ್ಲಳ್ಳಿ ಜಲಪಾತ ಮನಮೋಹಕವಾಗಿ ಕಂಗೊಳಿಸುತ್ತಿದೆ.
 • ಮೀನಿಗೆ ಏಕರೂಪ ದರ
  ಪೊನ್ನಂಪೇಟೆ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿರುವ ಮೀನಿನ ಮಳಿಗೆಗಳಲ್ಲಿ ಅಧಿಕ ದರದಲ್ಲಿ ಮೀನು ಮಾರಾಟ ಮಾಡುತ್ತಿರುವ ಆರೋಪದ ಹಿನ್ನಲೆಯಲ್ಲಿ ದರಪಟ್ಟಿ ತೂಗು ಹಾಕಿ ಏಕರೂಪ ದರದಲ್ಲಿ ಮಾರಾಟ ಮಾಡಲು ಪಂಚಾಯ್ತಿ ಪಿಡಿಒ ಆದೇಶಿಸಿದ್ದಾರೆ.
 • ದಯವಿಟ್ಟು ಲಸಿಕೆ ಹಾಕಿಸಿಕೊಳ್ಳಿ
  ಆದಿವಾಸಿಗಳ ಗಿರಿಜನ ಕಾಲೋನಿಯಲ್ಲಿ ಇನ್ನೂ ಲಸಿಕೆ ಹಾಕಿಕೊಳ್ಳುವುದಕ್ಕೆ ಹೆದರುತ್ತಿದ್ದಾರೆ.ವಿರಾಜಪೇಟೆಯ ಬಹುತೇಕ ಕಡೆಗಳಲ್ಲಿ ಶಾಸಕ ಕೆ.ಜಿ ಬೋಪಯ್ಯ ಅರಿವು ಮೂಡಿಸುತ್ತಿರುವಂತೆ,ಇತ್ತ ಆರೋಗ್ಯ ಇಲಾಖೆ ಸಹಾ ಲಸಿಕೆಯ ಮಹತ್ವವನ್ನು ತಿಳಿಸಲಾಗುತಿದ್ದು,ಮನವೂಲಿಸಲಾಗುತ್ತಿದೆ.
 • ಕಾರ್ಮಿಕರಿಗೆ ಕೋವಿಡ್ ಟೆಸ್ಟ್
  ಕಾಫಿ ತೋಟಗಳಲ್ಲಿ ಕೆಲಸ ಮಾಡುವ,ಲೈನ್ ಮನೆಯಲ್ಲಿ ವಾಸಿಸುವ ಕಾರ್ಮಿಕರು ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಹಿನ್ನಲೆಯಲ್ಲಾ ಆಯಾ ಎಸ್ಟೇಟ್ ಗಳಿಗೆ ತೆರಳಿ ಕೊವಿಡ್ ಪರೀಕ್ಷೆ ಮಾಡಲಾಗುತ್ತಿದೆ.ಹೊಸೂರು ಗ್ರಾ.ಪಂಗೆ ಸೇರಿದ ಮಠಪರಂಬು ತೋಟದಲ್ಲೌ ಬರೋಬ್ಬರಿ 97 ಕಾರ್ಮಿಕರ ಕೋವಿಡ್ ಪರೀಕ್ಷೆ ನಡೆಸಲಾಯಿತು.
error: Content is protected !!