fbpx

ಯಶಸ್ವಿಯಾಗಿ ನಡೆದ ಕೊಡಗು ಜಿಲ್ಲಾ ವೃತ್ತಿ ಪ್ರಕೋಷ್ಠದ ಕಾರ್ಯಕಾರಣಿ ಸಭೆ


ಕೊಡಗು ಜಿಲ್ಲಾ ವೃತ್ತಿ ಪ್ರಕೋಷ್ಠದ ಕಾರ್ಯಕಾರಣಿ ಸಭೆ ಇಂದು ಮಡಿಕೇರಿ ಬಿಜೆಪಿ ಕಚೇರಿಯಲ್ಲಿ ಜರುಗಿತು. ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ರಾಬಿನ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು, ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ಕೇಂದ್ರ ಮಂತ್ರಿಗಳಿಂದ ಗ್ರಾಮ ಪಂಚಾಯತ್ ಸದಸ್ಯರುಗಳವರೆಗೆ ಭ್ರಷ್ಟಾಚಾರ ಮುಕ್ತವಾಗುವಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಕರೆನೀಡಿದರು.

ಇವರೊಂದಿಗೆ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವಿ ಕಾಳಪ್ಪ ಅವರು ಮಾತನಾಡಿ ಪಕ್ಷ ಸಂಘಟನೆ ಹಾಗೂ ಈ ಹಿಂದೆ ನಡೆದ ವೃತ್ತಿ ಪ್ರಕೋಷ್ಠದ ಯೋಜನೆಗಳನ್ನು ಸ್ಮರಿಸಿದರು, ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನೀಡಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವೃತ್ತಿ ಪ್ರಕೋಷ್ಠದ ಸಂಚಾಲಕರಾದ ಶ್ರೀ ಚನ್ನಮಲ್ಲಿಕಾರ್ಜುನ ಪಾಟೀಲ್ ಮತ್ತು ಸಹ ಸಂಚಾಲಕ ಶ್ರೀ ರವಿ ಅವರು ಭಾಗವಹಿಸಿದ್ದರು. ಶ್ರೀ ಚನ್ನಮಲ್ಲಿಕಾರ್ಜುನ ಅವರು ಭಾರತೀಯ ಜನತಾ ಪಾರ್ಟಿ ಇತಿಹಾಸ, ಕಾರ್ಯವೈಕರಿ, ಸಿದ್ಧಾಂತಗಳ ಬಗೆಗೆ ಮಾತನಾಡಿದರು “ದೇಶ ಮೊದಲು ಎಂಬ ದೃಷ್ಟಿ‌ಕೋನ ಹೊಂದಿರುವ ಪಕ್ಷ ನಮ್ಮದು, ದೇಶದ ಏಕತೆ ಮತ್ತು ಅಕಂಡತೆಯೊಂದಿಗೆ ದೇಶವನ್ನು ಸಾಂಸ್ಕೃತಿಕವಾಗಿ ಉತ್ತುಂಗಕ್ಕೆ ಕೊಂಡುಹೋಗುವುದು ಭಾರತೀಯ ಜನತಾ ಪಕ್ಷದ ಮೂಲ ಉದ್ದೇಶ ಎಂದು ಹೇಳಿದರು. ನಂತರ ಮಾತನಾಡಿದ ರಾಜ್ಯ ಸಹ ಸಂಚಾಲಕರಾದ ಶ್ರೀ ರವಿ ಅವರು ಪ್ರಕೋಷ್ಠದ ಉದ್ದೇಶಗಳೇನು, ಯಾವ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಮತ್ತು ಹೆಚ್ಚಿನ ಸಂಖ್ಯೆಯ ಸದಸ್ಯರುಗಳನ್ನು ಸೇರ್ಪಡಿಸುವಂತೆ ಕರೆನೀಡಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಭಾಷಣವನ್ನು ಮಾಡಿದ ಕೊಡಗು ಜಿಲ್ಲಾ ಪ್ರಕೋಷ್ಠದ ಅಧ್ಯಕ್ಷರಾದ ಡಾಕ್ಟರ ಮೋಹನ್ ಅಪ್ಪಾಜಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕೊಡಗು ಜಿಲ್ಲಾ ವೃತ್ತಿ ಪ್ರಕೋಷ್ಠದ ಮುಂದಿನ ಯೋಜನೆಗಳನ್ನು ಸೋಮವಾರಪೇಟೆಯ ಸಂಚಾಲಕರಾದ ಶ್ರೀ ಲಿಖಿತ್ ಅವರು ಮಂಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ವೃತ್ತಿ ಪ್ರಕೋಷ್ಠ ಸಹ ಸಂಚಾಲಕರಾದ ಶ್ರೀ ಮನೋಜ್ ಮಂದಪ್ಪ ಅವರು ವಂದಿಸಿದರು. ಮಡಿಕೇರಿ ನಗರ ಸಹ ಸಂಚಾಲಕರಾದ ಶ್ರೀ ಮಂಜುನಾಥ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭೆ ಕಾರ್ಯಕ್ರಮದಲ್ಲಿ ಮಡಿಕೇರಿ ನಗರ ಸಂಚಾಲಕರಾದ ಶ್ರೀ ರಾಜೇಶ್ ಪೂಳಕಂಡ, ಮಡಿಕೇರಿ ಮಂಡಲ ಪ್ರಕೋಷ್ಠದ ಸಂಚಾಲಕರಾದ ಶ್ರೀ ಮಂಡೆಪಂಡ ಗಣಪತಿ ಹಾಗೂ ವೃತ್ತಿ ಪ್ರಕೋಷ್ಠದ ಸದಸ್ಯರುಗಳು ಉಪಸ್ಥಿತರಿದ್ದರು.

error: Content is protected !!