ಕೊಡಗು ಜಿಲ್ಲಾ ಯುವ ಮೋರ್ಚಾದಿಂದ ಅಟಲ್ ಜೀ ಹುಟ್ಟು ಹಬ್ಬದ ಪ್ರಯುಕ್ತ ಗೋ ಪೂಜೆ

ಕೊಡಗು: ಜಿಲ್ಲಾ ಯುವ ಮೋರ್ಚಾದ ವತಿಯಿಂದ ಭಾರತ ರತ್ನ ಮಾಜಿ ಪ್ರದಾನ ಮಂತ್ರಿ ಗಳು ಆದಂತ ಶ್ರೀಯುತ ಅಟಲ್ ಬಿಹಾರಿ ವಾಜಪೇಯಿ ಯವರ ಹುಟ್ಟು ಹಬ್ಬದ ಪ್ರಯುಕ್ತ ಕಾವಡಿ ಅಮ್ಮತಿಯ ಕಾಮದೇನು ಗೋ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ ಮತ್ತು ಗೋ ಪೂಜಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು…



ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾದ ದರ್ಶನ್ ಜೋಯಪ್ಪ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಪ್ರಸಾದ್ ಚೆಂಗಪ್ಪ ,ಜಿಲ್ಲಾ ಉಪಾಧ್ಯಕ್ಷರಾದ ಅಂಜನ್ ಚೆಟ್ಟಳ್ಳಿ, ಸುನಿಲ್ ಹಂಡ್ಲಿ, ಜಮ್ಮಡ ಗೌತಮ್, ವಿನಯ್ ರಾಜ್, ಜಿಲ್ಲಾ ಕಾರ್ಯದರ್ಶಿಗಳಾದ ಪ್ರೀತಮ್, ತಾತಂಡ ಹಿತೇಶ್ ಮತ್ತು ಯುವ ಮೋರ್ಚಾ ಮಂಡಲದ ಅಧ್ಯಕ್ಷ ಕವನ್, ಭರತ್, ಪ್ರದಾನ್ ಹಾಗು ಜಿಲ್ಲಾಸಮಿತಿ ಸದಸ್ಯರಾದ ರಾಮನಾಥನ್, ಸುಭಾಷ್, ಶರಣ ಪ್ರಕಾಶ್ ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು.