ಕೊಡಗು ಜಿಲ್ಲಾ ಕಾಂಗ್ರೆಸ್ಸಿನಿಂದ ಸಿದ್ಧರಾಮಯ್ಯರವರಿಗೆ ಅದ್ಧೂರಿ ಸ್ವಾಗತ

ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೆ ಒಳಗಾದ ಪ್ರದೇಶದ ವೀಕ್ಷಣೆಗೆ ಆಗಮಿಸಿದ್ದು,ಜಿಲ್ಲೆಗೆ ಪ್ರವೇಶೆಸುತ್ತಿದ್ದಂತೆ ಮೈಸೂರು-ಕೊಡಗು ಗಡಿ ಆನೆಚೌಕೂರಿನಲ್ಲಿ ಕಾಂಗ್ರೆಸ್ಸಿನ ಪಕ್ಷದಿಂದ ಅದ್ದೂರಿ ಸ್ವಾಗತ ಸಿಕ್ಕಿದೆ.

ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಪೊನ್ನಂಪೇಟೆಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನವೀನ್ ಶಾಲು ಹೊದಿಸಿ ಹೂಗುಚ್ಚ ನೀಡಿ ಸ್ವಾಗತಿಸಿದರು. ಕೆಪಿಸಿಸಿ ವಕ್ತಾರ, ಹೈಕೋರ್ಟ್ ವಕೀಲ ಎ.ಎಸ್ ಪೊನ್ನಣ್ಣ,ಎಂಎಲ್ಸಿ ವೀಣಾ ಅಚ್ಚಯ್ಯ ಸೇರಿದಂತೆ ಹಲವು ಮುಖಂಡರು ಸಿದ್ದರಾಮಯ್ಯ ರವರಿಗೆ ಸಾಥ್ ನೀಡಿದ್ದಾರೆ.

error: Content is protected !!