ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಣ್ಣ ಕತೆಗಳ ಗೌರಮ್ಮ ದತ್ತಿ ಸ್ಪರ್ಧೆ ಅರ್ಜಿ ಸಲ್ಲಿಸುವ ದಿನ ಮುಂದೂಡಿಕೆ

ಮಡಿಕೇರಿ. ಜು. 27: ಸಣ್ಣ ಕತೆಗಳ ಗೌರಮ್ಮ ದತ್ತಿ ಸ್ಪರ್ಧೆಗೆ ಅರ್ಜಿ ಸಲ್ಲಿಸುವ ಕುರಿತು ಅರ್ಜಿ ಸಲ್ಲಿಸಲು ದಿನಾಂಕ 05.07.2022 ಕೊನೆಯ ದಿನವಾಗಿತ್ತು ಆದರೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಶಾಲೆಗಳಿಗೆ ರಜೆ ಇದ್ದ ಕಾರಣ ಅರ್ಜಿ ಸಲ್ಲಿಸುವ ದಿನಾಂಕವನ್ನು 05.08.2022 ಕ್ಕೆ ಮುಂದೂಡಲಾಗಿದೆ.
ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಮತ್ತು ಕನ್ನಡ ನಾಡು, ನುಡಿ, ಸಂಸ್ಕೃತಿಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ಜಿಲ್ಲೆಯ ಶಾಲೆ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ಒಂದು ಭಾಗವಾಗಿ ಈ ಸಣ್ಣ ಕಥೆಗಳ ಸ್ಪರ್ಧೆಯನ್ನು ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಕೆಳಗಿನ ವಿಳಾಸ ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.
ಅರ್ಜಿ ಕಳುಹಿಸಬೇಕಾದ ವಿಳಾಸ
ಅಧ್ಯಕ್ಷರು,
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,
ಎಸ್.ಜಿ.ಆರ್.ವೈ ಕಟ್ಟಡ,
ಅಂಬೇಡ್ಕರ್ ಭವನದ ಬಳಿ,
ಸುದರ್ಶನ ವೃತ್ತ,
ಮಡಿಕೇರಿ.
ಸಂಪರ್ಕಿಸಲು ದೂರವಾಣಿ ಸಂಖ್ಯೆ:
ಎಂ.ಪಿ.ಕೇಶವ ಕಾಮತ್, ಅಧ್ಯಕ್ಷರು. 9448346276
ಎಸ್.ಐ. ಮುನೀರ್ ಅಹಮದ್, ಗೌ.ಕಾರ್ಯದರ್ಶಿ. 9886181613
ಶ್ರೀಮತಿ ರೇವತಿ ರಮೇಶ್, ಗೌ. ಕಾರ್ಯದರ್ಶಿ.
9663254829