fbpx

ಕೊಡಗು – ಕೇರಳ ಬಸ್ ಸಂಚಾರ ಆಗಸ್ಟ್ 16 ರವರೆಗೆ ಸ್ಥಗಿತ

ಕೋವಿಡ್ ಸೋಂಕು ನಿಯಂತ್ರಣ ಕ್ರಮವಾಗಿ ಕೊಡಗು ಜಿಲ್ಲಾಡಳಿತವು ಕೊಡಗಿನಿಂದ ಕೇರಳಕ್ಕೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ಗಳ ಸಂಚಾರವನ್ನು ಆಗಸ್ಟ್ 16 ರವರೆಗೆ ಸ್ಘಗಿತಗೊಳಿಸಿ ಆದೇಶಿಸಿದೆ.

ಅಂತೆಯೇ ಕೇರಳದಿಂದ ಕೊಡಗು ಜಿಲ್ಲೆಗೆ ಸಕಾ೯ರಿ, ಖಾಸಗಿ ಬಸ್ ಪ್ರವೇಶವನ್ನೂ ನಿಭ೯ಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕೊಡಗು – ಕೇರಳ ಗಡಿ ಚೆಕ್ ಪೋಸ್ಟ್ ಗಳಲ್ಲಿ ಮತ್ತಷ್ಟು ಹೆಚ್ಚಿನ ತಪಾಸಣೆಗೂ ಸೂಚಿಸಲಾಗಿದೆ.

error: Content is protected !!