ಕೆ.ಎಸ್.ಡಬ್ಲೂ.ಎ ವತಿಯಿಂದ ಜಿಲ್ಲೆಯ ಅನಿವಾಸಿ ಕುಟುಂಬಕ್ಕೆ ಕಿಟ್ ವಿತರಣೆ

ವರದಿ: ಅಶ್ರಫ್ ಚೆಯ್ಯಂಡಾಣೆ
ಚೆಯ್ಯಂಡಾಣೆ,ಮೇ 18: ತಾತ್ಕಾಲಿಕ ರಜೆಯ ನಿಮಿತ್ತ ವಿದೇಶದಿಂದ ಜಿಲ್ಲೆಗೆ ಆಗಮಿಸಿದ ಅನಿವಾಸಿ ಕುಟುಂಬ ಕೊರೋನ ಕಾಯಿಲೆಯ ಕಾರಣದಿಂದ ದುಡಿಮೆ ಇಲ್ಲದೆ ಅತಂತ್ರರಾಗಿ ತಮ್ಮ ತಮ್ಮ ಮನೆಗಳಲ್ಲಿ ದಿನ ದೂಡುತಿದ್ದಾರೆ ಎಂದು ತಿಳಿದು ಬಂತು. ತಕ್ಷಣ ಕಾರ್ಯೋನ್ಮುಕರಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (ಕೆ.ಎಸ್.ಡಬ್ಲೂ.ಎ) ಯುಎಇ ವತಿಯಿಂದ ಜಿಲ್ಲೆಯ ಸಂಕಷ್ಟದಲ್ಲಿರುವ ಆಯ್ದ ಅನಿವಾಸಿ ಕುಟುಂಬ ಗಳಿಗೆ ಕಿಟ್ ಗಳನ್ನು ಸಂಘಟನೆಯ ವತಿಯಿಂದ ವಿತರಿಸಲಾಯಿತು.
ಆ ಪ್ರಯುಕ್ತ ಯುಎಇಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಸಂಘಟನೆಯ ಯುಎಇ ಘಟಕದ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಮಾತನಾಡಿ ಸಂಘಟನೆಯ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಮಾಡುತ್ತಿರುವ ಸಮಾಜ ಮುಖಿ ಸೇವೆಗಳನ್ನು ಸವಿಸ್ತಾರವಾಗಿ ಪ್ರಸ್ತಾಪಿಸಿದರು. ಅಲ್ಲದೆ ಆಧ್ಯತೆ ಮೇರೆಗೆ ಸರಕಾರಗಳು ಸಂಕಷ್ಟ ದಲ್ಲಿರುವ ಅನಿವಾಸಿ ಕೊಡಗಿನವರಿಗೆ ಪ್ರತ್ಯೇಕ ಪ್ಯಾಕೇಜ್ ನೀಡಲು ಕೋರಿಕೊಂಡರು. ಪತ್ರಿಕಾ ಗೋಷ್ಠಿಯಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಇದರ ಪ್ರಧಾನ ಕಾರ್ಯದರ್ಶಿ ಜೆ. ಎಚ್.ಇಸ್ಮಾಯಿಲ್ ಮೂರ್ನಾಡ್ ಪದಾಧಿಕಾರಿಗಳಾದ ಮುಜೀಬ್ ಕಡಂಗ ಹಾಗೂ ಸಂಘಟನೆಯ ಸಲಹಾ ಸಮಿತಿ ಮತ್ತು ಕ್ಯಾಬಿನೆಟ್ ಸದಸ್ಯರು ಉಪಸ್ಥಿತರಿದ್ದರು.