ಕೊಡಗು ಕಾಂಗ್ರೆಸ್ ವತಿಯಿಂದ ‘ಭಾರತ್ ಜೋಡೋ ಯಾತ್ರೆಗೆ ಭರ್ಜರಿ ಸ್ವಾಗತ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ‘ಭಾರತ್ ಜೋಡೋ’ ಯಾತ್ರೆಯು ಆ.1 ರಂದು ನಂಜನಗೂಡು ವ್ಯಾಪ್ತಿಯ ಕಳಲೆ ಗೇಟ್ ಬಳಿ ಆಗಮಿಸಲಿದ್ದು, ಕೊಡಗಿನಿಂದ ಸುಮಾರು 5 ಸಾವಿರ ಮಂದಿ ಪಾಲ್ಗೊಂಡು ಸ್ವಾಗತಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಎಂ.ಲಕ್ಷ್ಮಣ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖ ಜೀವಿಜಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ವಕ್ತಾರ ಟಿ.ಇ.ಸುರೇಶ್, ಡಿಸಿಸಿ ಸದಸ್ಯ ಗಂಗಧ ಉಪಸ್ಥಿತರಿದ್ದರು.