ಕೊಡಗು ಒಂದು ಲೋಕಸಭಾ ಕ್ಷೇತ್ರವಾಗಬೇಕು: ಹೆಚ್. ವಿಶ್ವನಾಥ್ ಅಭಿಮತ

ಕೊಡಗು: ದೇಶದಲ್ಲಿ ಕೇವಲ 2-3 ಲಕ್ಷ ಜನಸಂಖ್ಯೆಯಿಂದ ಕೂಡಿರುವ ಜಿಲ್ಲೆಗಳನ್ನು ಲೋಕಸಭಾ ಕ್ಷೇತ್ರ ಮಾಡಲಾಗಿದೆ,ಹಾಗಾಗಿ ನಾಲ್ಕು ಲಕ್ಷದಷ್ಟು ಜನಸಂಖ್ಯೆ ಇರುವ ಕೊಡಗು ಜಿಲ್ಲೆಯನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನಾಗಿ ಮಾಡಬೇಕೆಂದು ಮಾಜಿ ಸಂಸದ ಹೆಚ್. ವಿಶ್ವನಾಥ್ ಅಭಿಪ್ರಾಯ ಪಟ್ಟಿದ್ದಾರೆ.

ಮಡಿಕೇರಿಯ ಹೊರವಲಯದಲ್ಲಿ ನಡೆದ ಕಾರ್ಯಕ್ರಮದೊಂದಿಗೆ ಮಾತನಾಡಿದ ಅವರು, ಕೊಡಗಿನಂತಹ ಜಿಲ್ಲೆಗೆ ಈ ಜಿಲ್ಲೆಯವರೇ ಸಂಸದರಾದರೆ ಕೇಂದ್ರ ಮಟ್ಟದ ಹಲವು ಯೋಜನೆಗಳನ್ನು ಜಿಲ್ಲೆಗೆ ತಂದು ಅಭಿವೃದ್ದಿ ಪಡಿಸಬಹುದು ಎಂದರು.

error: Content is protected !!