fbpx

ಕೊಡಗಿನ ಹಿರಿಯ ಪತ್ರಕರ್ತ ಮನು ಶೆಣೈ ನಿಧನ

ಕೊಡಗು ಪತ್ರಿಕಾಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ, ಕೊಡಗು ಸಮಾಚಾರ ಪತ್ರಿಕೆಯ ಸಂಪಾದಕ ಬಿ.ಎನ್. ಮನುಶೆಣೈ ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿರಾಜಪೇಟೆ ನಗರದ ನಿವಾಸಿ ಮನು ಶೆಣೈ ಅವರ ಅಗಲಿಕೆ ಕೊಡಗು ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ. ಅರವತ್ತಮೂರು ವರ್ಷದ ಮನುಶೆಣೈ ಅವರಿಗೆ ಕಳೆದ ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆ ಕಾಡಿತ್ತು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಅಂತಿಮ ದರ್ಶನಕ್ಕಾಗಿ ವಿರಾಜಪೇಟೆಯ ಸುಭಾಷ್ ನಗರದ ಅವರ ಮನೆಯಲ್ಲಿ ಇಡಲಾಗಿದೆ.

ಇoದು ಸಂಜೆ 6.00 ಗಂಟೆಯ ನಂತರ ವಿರಾಜಪೇಟೆಯ ಅರಸು ನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

error: Content is protected !!