fbpx

ಕೊಡಗಿನ ಯುವಕ ಗೋವಾದಲ್ಲಿ ಸಾವು

ವಿದೇಶಕ್ಕೆ ತೆರಳಬೇಕಿದ್ದ ಕೊಡಗಿನ ಅರ್ವತೋಕ್ಲವಿನ ಯುವಕನೊಬ್ಬ ಸೇಹಿತರೊಂದಿಗೆ ಗೋವಾಕ್ಕೆ ಪ್ರವಾಸಕ್ಕೆ ತೆರಳಿ ಬೀಚ್ ನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ನಡೆದಿದೆ.

ಮಡಿಕೇರಿ ತಾಲ್ಲೂಕು ಅರ್ವತೋಕ್ಲು ಗ್ರಾಮದ ಉಷಾ ಉತ್ತಪ್ಪ ಎಂಬುವವರ ಪುತ್ರ ವರುಣ್ ಉತ್ತಯ್ಯ 21 ಮೃತ ದುರ್ದೈವಿಯಾಗಿದ್ದು, ಮಂಗಳೂರಿನಲ್ಲಿ ಹೊಟೇಲ್ ಮ್ಯಾನೆಜ್ ಮೆಂಟ್ ಕೋರ್ಸ್ ಮುಗಿಸಿ ಕೇರಳದ ಕೆಲವು ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದು, ನಿಷೇಧದ ನಡುವೆಯೂ ಬೀಚ್ ಪ್ರವೇಶಿಸಿ ದುರ್ಘಟನೆ ನಡೆದಿದೆ.

ಸದ್ಯಕ್ಕೆ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು.

error: Content is protected !!