fbpx

ಕೊಡಗಿನ ಮಹಿಳಾ ಸಾಧಕಿಯರಿಗೆ ಎ. ಕೆ. ಸುಬ್ಬಯ್ಯ ಪ್ರಶಸ್ತಿ – ೨೦೨೧: ಅರ್ಜಿ ಆಹ್ವಾನ

ಕೊಡಗು: ಹಿರಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಜೀವನದುದ್ದಕ್ಕೂ ತುಳಿತಕ್ಕೊಳಗಾದವರ ಪರ ಹೋರಾಟಮಾಡಿದ ದಿವಂಗತ ಎ. ಕೆ. ಸುಬ್ಬಯ್ಯ ಅವರ ಸ್ಮರಣಾರ್ಥ ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಇನ್ ಎಜುಕೇಶನ್ (ಕೇರ್) ವತಿಯಿಂದ ಕೊಡಗಿನ ಮಹಿಳಾ ಸಾಧಕಿಯರಿಗೆ ಎ. ಕೆ. ಸುಬ್ಬಯ್ಯ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಪ್ರಶಸ್ತಿಯೊಂದಿಗೆ ರು. 5000 ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕೊಡಗಿನ ನಿವಾಸಿಗಳಿಂದ ಈ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ವತಃ ಅರ್ಜಿ ಸಲ್ಲಿಸಬಹುದು ಅಥವಾ ಸಾಧಕಿಯರ ಹೆಸರನ್ನು ನಾಮನಿರ್ದೇಶನ ಮಾಡಬಹುದು. ಅರ್ಜಿಯನ್ನು 25/08/2021 ರೊಳಗೆ careacrossindia @ gmail . com ಕಳುಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ನಿರ್ದೇಶಕರಾಗಿರುವ ಡಾ. ತೌಸೀಫ್ ಮಡಿಕೇರಿಯವರನ್ನು (9591802687) ಸಂಪರ್ಕಿಸಬಹುದು.

error: Content is protected !!