ಕೊಡಗಿನ ಗೌಡ ಸಮಾಜದ ವಿವಿಧ ಸಮುದಾಯ ಭವನಗಳ ಕಾಮಗಾರಿಗೆ ತಲಾ 50 ಲಕ್ಷ ಮಂಜೂರು

ವಿವಿಧ ವರ್ಗಗಳ ಸಮುದಾಯ ಅಭಿವೃದ್ದಿ ಯೋಜನೆಯಡಿಯಲ್ಲಿ ಸಂಘ ಸಂಸ್ಥೆಗಳಿಗೆ ಸಮುದಾಯ ಭವನ ಕಾಮಗಾರಿ ಅಡಿಯಲ್ಲಿ ಕೊಡಗಿನ ನಾಲ್ಕು ಗೌಡ ಸಮುದಾಯ ಭವನಕ್ಕೆ ಹೆಚ್ಚುವರಿ ಅನುದಾನ ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಪ್ರವರ್ಗ 1,2ಎ,3ಎ ಮತ್ತು ಪ್ರವರ್ಗ 3ಬಿ ಸೇರಿದ ಜಾತಿಗಳ ನೊಂದಾಯಿತ ಸಂಘ ಸ್ವಯಂ ಸೇವಿ ಸಂಸ್ಥೆ ಅಥವಾ ಟ್ರಸ್ಟ್ ಗಳಿಗೆ ನೀಡಲಾಗುತ್ತಿದ್ದ ಸಹಾಯಧನದಲ್ಲಿ ಹೆಚ್ಚುವರಿ ಮಾಡಿದೆ.ಅಗತ್ಯ ಸಂದರ್ಭಗಳಲ್ಲಿ ಸಡಿಲಗೊಳಿಸಿ ವಿಶೇಷ ಪ್ರಕರಣ ಎಂದು ಪರಿಗಣಿಸ ಅನುಧಾನ ನಿಗದಿ ಪಡಿಸಲಾಗಿದ್ದು,ರಾಜ್ಯದ ವಿಜಯಪುರ ಶ್ರೀ ಗುರುಗಂಗಾಧೇಶ್ವರ ಸೇವಾ ಸಂಘ ಸೇರಿದಂತೆ

ಮಡಿಕೇರಿ ಗೌಡ ಸಮಾಜದ ಸಮುದಾಯ ಭವನ,
ಭಾಗಮಂಡಲ ಗೌಡ ಸಮಾಜದ ಸಮುದಾಯ ಭವನ,
ಕಾರುಗುಂದ ಗೌಡ ಸಮಾಜದ ಸಮುದಾಯ ಭವನ ಮತ್ತು ಚೆಟ್ಟಳ್ಳಿ ಗೌಡ ಸಮಾಜದ ಸಮುದಾಯ ಭವನ ಗಳಿಗೆ ತಲಾ 50 ಲಕ್ಷ ಅನುದಾನ ಮಂಜೂರು ಮಾಡಿದೆ.

error: Content is protected !!