ಕೊಡಗಿನ ಗಡಿ ಶನಿವಾರಸಂತೆಯಲ್ಲೂ ಸಿದ್ದರಾಮಯ್ಯಗೆ ಘೇರಾವ್..!

ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡುವ ಸಲುವಾಗಿ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರವರು ಜಿಲ್ಲೆಯ ಹೊರ ಹೋಗುವಾಗಲೂ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಬಿಸಿ ಮುಟ್ಟಿದೆ.
ಸೋಮವಾರಪೇಟೆಯಲ್ಲಿ ಕಾರ್ಯಕರ್ತರಲ್ಲಿ ಆಗಸ್ಟ್ 26 ರಂದು ಎಸ್ಪಿ ಕಚೇರಿ ಮುತ್ತಿಗೆ ನಡೆಸುವ ಸಲುವಾಗಿ ಸಭೆ ನಡೆಸಿ ತೆರಳುತ್ತಿದ್ದ ಸಂದರ್ಭ ಶನಿವಾರಸಂತೆಯಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಬಿಜೆಪಿ ಕಾರ್ಯಕರ್ತರು ಘೆರಾವ್ ಹಾಕುವುದಕ್ಕೆ ಮುಂದಾಗಿದ್ದು, ಈ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಜಟಾಪಟಿಯೂ ನಡೆದಿದ್ದು, ಬಳಿಕ ಪೊಲೀಸ್ ಭದ್ರತೆಯೊಂದಿಗೆ ಸಿದ್ದರಾಮಯ್ಯ ತೆರಳಬೇಕಾಯಿತು.

ಹಾಸನ ಜಿಲ್ಲೆಯ ಸಕಲೇಶಪುರ ದ ಚಿಕ್ಕಮಗಳೂರಿನ ರಸ್ತೆಯಲ್ಲೂ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ಮಾಡಲು ಮುಂದಾಗಿದ್ದು, ಖುದ್ದು ಹಾಸನ ಎಸ್ಪಿ ಸಮ್ಮುಖದಲ್ಲೇ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಮತ್ತೆ ಪೊಲೀಸ್ ಬಂದೋಬಸ್ತ್ ನಡುವೆ ಚಿಕ್ಕಮಗಳೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ.