ಕೊಡಗಿನ ಕೆಚ್ಚೆದೆಯ ಸ್ಕ್ವಾಡ್ರನ್ ಲೀಡರ್ ಪ್ರತಿಮೆ ಇಂದು ಲೋಕಾರ್ಪಣೆ…!

ಸುದ್ದಿ ಸಂತೆ ವಿಶೇಷ ಲೇಖನ
ರಜತ್ ರಾಜ್ ಡಿ.ಹೆಚ್, ಪ್ರಧಾನ ಸಂಪಾದಕರು
ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬೋಪಯ್ಯ ದೇವಯ್ಯ ಅವರು ವಾಯುಸೇಮೆಯಲ್ಲಿ ಮಹಾ ವೀರ ಚಕ್ರ ಪ್ರಶಸ್ತಿ ಗೌರವ ಸಿಕ್ಕಿರುವ ಏಕೈಕ ಯೋಧರು ಎಂಬುದು ಹುಬ್ಬೇರಿಸುವಂತಹ ವಿಚಾರ. ಪರಮ ವೀರ ಚಕ್ರ ಪ್ರಶಸ್ತಿ ನಂತರದ ಎರಡನೇ ಪ್ರತಿಷ್ಠಿತ ಪ್ರಶಸ್ತಿಯೇ ಮಹಾ ವೀರ ಚಕ್ರದ ಪ್ರಶಸ್ತಿಯ ಗೌರವವೇ ಆಗಿದೆ.

ಅದು 1965ನೇ ಇಸವಿ. ಪಾಕಿಸ್ತಾನ ಹಾಗು ಭಾರತದ ನಡುವೆ ರೋಚಕ ರೋಮಾಂಚಕ ಯುದ್ಧ ನಡೆಯುತ್ತಿದ್ದ ಸಮಯ. ಅಜ್ಜಮಾಡ ದೇವಯ್ಯ ಅವರಿಗೆ ಪಾಕಿನ ಯುದ್ಧ ವಿಮಾನವನ್ನು ಹೊಡೆದುರುಳಿಸುವ ಗುರಿಯನ್ನು ನೀಡಲಾಗಿತ್ತು. ದೇಶ ಸೇವೆ ಮಾಡುವ ಅವರ ತವಕ ತಾರಕದಲ್ಲಿತ್ತು…


ಈ ಆಪರೇಷನ್ ಅಲ್ಲಿ ಒಟ್ಟು 13 ಯೋಧರ ನಿಯೋಜನೆಯಾಗಿತ್ತು. ಪಾಕಿಸ್ತಾನದ ಸರಗೋದ ವಾಯುನೆಲೆಯ ಹತ್ತಿರ ಈ ಆಪರೇಷನ್ ನಡೆಯಬೇಕಿತ್ತು. ಫ್ರಾನ್ಸ್ ನಿರ್ಮಿತ ಎಂ.ಡಿ 454 ಮೈಸ್ಟೆರ್ 4 ಫೈಟರ್ ಬಾಂಬರ್ ವಿಮಾನವನ್ನು ಆಗಸಕ್ಕೆ ಹಾರಿಸಿ, ದೇವಯ್ಯ ಅವರು ಅತ್ಯಂತ ನಿಖರತೆ ಹಾಗು ಚಾಕಚಕ್ಯತೆಯೊಂದಿಗೆ ಪಾಕಿಸ್ತಾನದ ಎಫ್-104 ಇಂಟರ್ ಸೆಪ್ಟೆರ್ ವಿಮಾನವನ್ನು ಹೊಡೆದುರುಳಿಸುವ ರಣೋತ್ಸಾಹದಲ್ಲಿ ಇದ್ದರು. ಇವರು ಬಳಸಿದ್ದ ಎಂ.ಡಿ 454 ಮೈಸ್ಟರ್ 4 ಯುದ್ಧ ವಿಮಾನವು ಪಾಕಿಸ್ತಾನ ಬಳಸಿದ್ದ ಎಫ್-104 ಯುದ್ಧ ವಿಮಾನಕ್ಕಿಂತ ಒಂದು ಪೀಳಿಗೆ ಹಿಂದಿನದ್ದಾಗಿದ್ದು, ಅದರ ಗುಣ ಲಕ್ಷಣಗಳು ಅಷ್ಟೇನು ನವನವೀನತೆಯಿಂದ ಕೂಡಿರಲಿಲ್ಲ.

ಕಡಿಮೆ ಕ್ಷಮತೆ ಹೊಂದಿದ್ದ ಭಾರತದ ವಿಮಾನ ದಾಳಿ ಪ್ರತಿದಾಳಿ ಮಾಡಿ ಬಹಳ ಘಾಸಿಗೊಂಡಿತ್ತು. ಆದರೂ ಛಲ ಬಿಡದೆ ಕಾದಾಡುವ ಕಸುವು ತೋರಿದ್ದರು ದೇವಯ್ಯ ಅವರು. ಕೊನೆಗೆ ಪಾಕಿಸ್ತಾನದ ಎಫ್-104 ಮೈಸ್ಟರ್ ವಿಮಾನ ಚಲಾಯಿಸುತ್ತಿದ್ದ ಪಾಕ್ ಸೇನೆಯ ಲೆಫ್ಟಿನೆಂಟ್ ಅಮ್ಜಾದ್ ಹುಸ್ಸೇನ್ ಅವರ ಅವರ ವಿಮಾನದಿಂದ ಹೊರ ಹಾರಿ ಪ್ಯಾರಜೂಟ್ ಮೂಲಕ ನೆಲದ ಮಟ್ಟ ತಲುಪಿ ಸೋಲನ್ನು ಅಪ್ಪಿದ್ದರು. ಪಾಕಿಸ್ತಾನದ ವಿಮಾನವನ್ನು ಸುಟ್ಟು ಭೂದಿ ಆಗುವಂತೆ ಮಾಡಿ ಸೋಲಿಸಿದ್ದರು ದೇವಯ್ತ ಅವರು.
ನಂತರ ದುರಾದೃಷ್ಟ ವಶಾತ್ ಅವರು ತಮ್ಮ ವಿಮಾನದಿಂದ ಹೊರ ಹಾರಿದರೂ ಭಾರತಕ್ಕೆ ಮರಳಲು ಆಗಲಿಲ್ಲ. ಅವರ ಪತ್ತೆ ಸಾಧ್ಯವಾಗಲಿಲ್ಲ. ನಾಪತ್ತೆಯಾಗಿ ಉಳಿದರು. ಹಾಗಿದ್ದಾಗ 1988ರವರೆಗೂ ಅವರ ಯಾವ ಸುಳಿವೂ ಸಿಗಲಿಲ್ಲ. ಅದೇ ವರ್ಷ ಅವರಿಗೆ ಮಹಾ ವೀರ ಚಕ್ರ ಪ್ರಶಸ್ತಿಯನ್ನು ಅವರ ಕುಟುಂಬಕ್ಕೆ ನೀಡಲಾಯಿತು.
ಎಂದೋ ಆಗಬೇಕಾಗಿದ್ದುದು ಇಂದು ಆಗಿದೆ…!

ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರ ಆದರ್ಶ ನಮ್ಮ ಈ ವೀರರ ನೆಲಕ್ಕೆ ಅತ್ಯಂತ ಪ್ರಮುಖ ಹಾಗು ಪ್ರಸ್ತುತವೆನಿಸುವಂತಹುದು. ಅವರ ಪ್ರತಿಮೆ ಸ್ಥಾಪನೆಗೆ ಹಲವಾರು ವರ್ಷಗಳ ಹಿಂದೆಯೇ ಚರ್ಚೆಗಳು ನಡೆದು ಬೇಡಿಕೆ ಇಡಲಾಗಿತ್ತು. ಯೋಜನೆ ಆರಂಭವಾಗುವ ಅಥವಾ ಪೂರ್ಣಗೊಳ್ಳುವ ಯಾವುದೇ ಅಕ್ಷಣಗಳು ಕಂಡು ಬಂದಿರಲಿಲ್ಲ. ಅದಕ್ಕೆ ಸಂಬಂಧಿಸಿದಂತೆ ಕೊಡವ ಮಕ್ಕಡ ಕೂಟ, ಅಜ್ಜಮಾಡ ಕುಟುಂಬಸ್ಥರು, ಸ್ಕ್ವಾಡ್ರನ್ ಲೀಡರ್ ದೇವಯ್ಯ ಸ್ಮಾರಕ ಪ್ರತಿಮೆ ನಿರ್ಮಾಣ ಟ್ರಸ್ಟ್ ಇಂದ ನಿರಂತರ ಭಗೀರಥ ಪ್ರಯತ್ನಗಳು ನಡೆದೇ ಇತ್ತು. ಅದರ ಭಾಗವಾಗಿಯೇ ಪ್ರತಿ ವರ್ಷ ಸೆ.07ರಂದು ನಗರದ ಹೃದಯ ಭಾಗದಳ್ಇ ಇರುವ ಪ್ರಮುಖ ವೃತ್ತದಲ್ಲಿ ಅವರ ಸ್ಮರಣಾ ದಿನಾಚರಣೆಯನ್ನು ಬರಲಾಗುತ್ತಿತ್ತು. ಈ ವರ್ಷ ಇಂದು ಸೆ.07 ರಂದು 11 ಗಂಟೆಗೆ ಈ ಬೇಡಿಕೆ ಈಡೇರುತ್ತಿದೆ. ಹಲವು ವರ್ಷಗಳ ಬೇಡಿಕೆ ಈಡೇರುತ್ತಿರುವುದು ಎಲ್ಲರಿಗೂ ಸಂತಸದ ವಿಚಾರವೇ ಆಗಿದೆ. ಪುತ್ಥಳಿಯ ಲೋಕಾರ್ಪಣೆ ಇಂದು ನಡೆಯಲಿದೆ. ಅದನ್ನು ಏರ್ ಮಾರ್ಷಲ್ ಕೊಡಂದೇರ ಸಿ. ಕಾರ್ಯಪ್ಪ ಅವರು ನೆರವೇರಿಸಲಿದ್ದಾರೆ. ಈ ಪ್ರತಿಮೆಯು 6 ಅಡಿಗಿಂತಲೂ ಎತ್ತರವಿದ್ದು, ಕಂಚಿನ ಪ್ರತಿಮೆಯಾಗಿದೆ. ಇದು 15 ರಿಂದ 20 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಕಿಸಾನ್
ತಿಮ್ಮಯ್ಯ ಮ್ಯುಸಿಯಂ ಕೂಡ ಇನ್ನೇನು ಸಿದ್ಧವಾಗಿ ತೆರೆಯಲಿದೆ. ಈಗಾಗಲೇ ಫೀಲ್ಡ್ ಮಾಷ೯ಲ್ ಕೆ.ಎಂ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಸ್ವಾತಂತ್ರ್ತ ಹೋರಾಟಗಾರರಾದ ಗುಡ್ಡೆಮನೆ ಅಪ್ಪಯ್ಯ ಅವರ ಪ್ರತಿಮೆಗಳು ಈ ಹೆಮ್ಮೆಯ ನೆಲದಲ್ಲಿ ಈಗಾಗಲೇ ಇದ್ದು, ಈಗ ಅದರ ಸಾಲಿಗೆ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬೋಪಯ್ಯ ದೇವಯ್ಯ ಅವರ ಪ್ರತಿಮೆಯೂ ಸೇರಿಕೊಳ್ಳಲಿದೆ ಎಂದು ಕೊಡಗಿಗೇ ಘನತೆಯ ವಿಚಾರವಾಗಿದೆ.
||ಜೈ ಜವಾನ್, ಜೈ ಕಿಸಾನ್||