fbpx

ಕೊಡಗಿನಲ್ಲಿ 23 ರಿಂದ 9 ಮತ್ತು ಮೇಲ್ಪಟ್ಟ ತರಗತಿಗಳ ಆರಂಭ ಇಲ್ಲ

ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ತಮ್ಮ ದಿನಾಂಕ: 16.08.2021ರ ಸುತ್ತೋಲೆಯಲ್ಲಿ ರಾಜ್ಯದಲ್ಲಿ ಕೋವಿಡ್-19ರ ಸೋಂಕಿನ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9 ಮತ್ತು 10ನೇ ತರಗತಿಗಳನ್ನು ದಿನಾಂಕ: 23.08.2021 ರಿಂದ ಆರಂಭಿಸುವ ಬಗ್ಗೆ ನಿರ್ದೇಶನ ನೀಡುರುತ್ತಾರೆ.

ಆದರೆ ಕೋವಿಡ್-19 ಸೋಂಕಿನ ಪ್ರಮಾಣ ಶೇ.2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಪರ್ಯಾಯ ವಿಧಾನದಲ್ಲಿ ಕಲಿಕೆ ಮತ್ತು ಬೋಧನ ಪ್ರಕ್ರಿಯೆಗಳನ್ನು ಮುಂದುರೆಸಲು ತಿಳಿಸಿರುತ್ತಾರೆ.

ಕೊಡಗು ಜಿಲ್ಲೆಯಲ್ಲಿ ಕಳೆದ 10 ದಿನಗಳ ಸರಾಸರಿ ಕೋವಿಡ್-19 ಸೋಂಕಿನ ಪ್ರಮಾಣವು ಶೇ.2ರಷ್ಟು ಇರುವುದರಿಂದ ದಿನಾಂಕ: 23.08.2021 ರಿಂದ 9 ಮತ್ತು ಮೇಲ್ಪಟ್ಟ ತರಗತಿಗಳನ್ನು ಆರಂಭಿಸಲು ಆಗುವುದಿಲ್ಲವೆಂದು ತಿಳಿಸಿದೆ.

ಈ ತರಗತಿಗಳನ್ನು ಆರಂಭಿಸುವ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು ಎಂದು .ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ ಮಾಹಿತಿ ನೀಡಿದ್ದಾರೆ.

error: Content is protected !!