fbpx

ಕೊಡಗಿನಲ್ಲಿ ರಾತ್ರಿ ಕರ್ಫೂ ಸಡಿಲಿಕೆ‌: ಜಿಲ್ಲಾಡಳಿತ ಆದೇಶ

ಕೊಡಗು: ಕೊರೊನಾ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಹೇರಲಾಗಿದ್ದ ಶನಿವಾರ ಮತ್ತು ಭಾನುವಾರದ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗಿದೆ.ಜುಲೈ 15 ರಿಂದ ಜುಲೈ 31 ರ ವರೆಗೆ ಇದ್ದ ಲಾಕ್ಡೌನ್ ಮತ್ತು ರಾತ್ರಿ ಕರ್ಫೂ
ನಲ್ಲಿ ಸಡಿಲಿಕೆ ಮಾಡಲಾಗಿದ್ದು,ಜಿಲ್ಲಾಡಳಿತ ನಿಗದಿ ಪಡಿಸಿರುವ ಮಾರ್ಗ ಸೂಚಿ ಈ ಕೆಳಗಿನಂತಿದೆ.


ಜುಲೈ 25 ಶನಿವಾರದಂದು ಪೂರ್ಣದಿನದ ಲಾಕ್ ಡೌನ್ ಸಡಿಲಿಕೆ,ಜುಲೈ 26 ಭಾನುವಾರದಂದು ಪೂರ್ಣದಿನದ ಲಾಕ್ ಡೌನ್ ಎಂದಿನಂತೆ ಮುಂದುವರಿಕೆ, ವಾರದ ಎಲ್ಲಾ ದಿನಗಳಲ್ಲಿ ಸಂಜೆ 6 ರಿಂದ ಮರುದಿನ ಬೆಳಗ್ಗೆ ಇದ್ದ ಕರ್ಫೂ ರಾತ್ರಿ 9:00 ಗಂಟೆಯಿಂದ ಬೆಳಗ್ಗೆ 5:00ಗಂಟೆಯ ವರೆಗೆ ಎಂದು ಮಾರ್ಪಾಡು ಮಾಡಲಾಗಿದೆ. ವಾಯುವಿಹಾರಕ್ಕೆ ತೆರಳುವವರಿಗೆ
ಬೆಳಗ್ಗೆ 6:00 ರಿಂದ 8:00 ಮತ್ತು ಸಂಜೆ 5:00 ರಿಂದ 7:00 ಗಂಟೆಯವರೆಗೆ ಮಾತ್ರ ಉದ್ಯಾನವನಗಳಲ್ಲಿ ಅದು ಮುಂದುವರೆಯಲಿದ್ದು ಸಮಯ ಈ ಉದ್ಯಾನವನಗಳಲ್ಲಿ ಕುಳಿತುಕೊಳ್ಳುವ ಬೆಂಚ್ ಗಳ ಬಳಕೆ ಮಾಡುವಂತಿಲ್ಲ.

ಬಿತ್ತು ಲಾಠಿ ಏಟು: ಮಂಗಳವಾರ ರಾತ್ರಿ ಸಂಜೆ ಆರು ಗಂಟೆಯಿಂದ ಇದ್ದ ಲಾಕ್ಡೌನ್ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಸೋಮವಾರಪೇಟೆ ಪಟ್ಟಣ ಮತ್ತು ಹೊರವಲಯದಲ್ಲಿ ದ್ವಿಚಕ್ರ ವಾಹನಗಳಲ್ಲಿ ಅಡ್ಡಾಡುತ್ತಿದ್ದವರಿಗೆ ಪೋಲಿಸರು ಲಾಠಿ ರುಚಿ ತೋರಿಸಿದ್ದಾರೆ.

error: Content is protected !!