ಕೊಡಗಿನಲ್ಲಿ ಮುಂದುವರೆದ ಹುಲಿ ದಾಳಿ: ಕೊಂಗಣದಲ್ಲಿ ಜಾನುವಾರು ಬಲಿ

ಹುಲಿ ಹತ್ಯೆ ನಡೆಸಿ ಚರ್ಮ ಮಾರಾಟದ ವಿಚಾರ ತೀವ್ರ ಚರ್ಚೆಗೆ ಈಡಾಗಿರುವ ಬೆನ್ನಲ್ಲೇ, ದಕ್ಷಿಣಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಕೊಂಗಣದಲ್ಲಿ ಮತ್ತೆ ವ್ಯಾಘ್ರ ದಾಳಿ ಮುಂದುವರೆಸಿದೆ.
ಕೊಂಗಣ ಗ್ರಾಮದ ಪೊಣಟಿರ ಯಶೋಧ ಎಂಬುವವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದ ಸಂದರ್ಭ ದಾಳಿ ನಡೆದಿದ್ದು, ಹಸುವನ್ನು ಬಲಿ ಪಡೆಯಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರದ ಭರವಸೆ ನೀಡಿದ್ದಾರೆ