ಕೊಡಗಿನಲ್ಲಿ ಮಳೆಯ ಅಬ್ಬರ

ಮುಂದುವರೆದಿದ್ದು,ಇನ್ನೆರೆಡು ದಿನ ಆರಂಜ್ ಅಲರ್ಟ್ ಇರಲಿದೆ ಕಾವೇರಿ ನದಿಯಲ್ಲಿ ನೀರಿನ ಏರಿಕೆಯಾಗಿದೆ.

ತಗ್ಗು ಪ್ರದೇಶದಲ್ಲಿ ಮುಳುಗಡೆ ಭೀತಿ ಎದುರಾಗಿದ್ದು
ಬಲಮುರಿ ಕೆಳ ಸೇತುವೆ ಮುಳುಗಡೆಯಾಗಿದೆ ಮತ್ತು ದಕ್ಷಿಣಕೊಡಗಿನ ಲಕ್ಷ್ಮಣ ತೀರ್ಥ ನದಿಯಲ್ಲೂ ನೀರಿನ ಏರಿಕೆ ಕಂಡು ಬಂದಿದ್ದು,ನಿಟ್ಟೂರು ಬಾಳೆಲೆ ಭಾಗದ ಭತ್ತದ ಗದ್ದೆಗಳಿಗೆ ನುಗ್ಗುವ ಸೂಚನೆ ಕಂಡು ಬಂದಿದೆ.

ಬಲಮುರಿ ಸೇತುವೆ

ಭಾಗಮಂಡಲ ಸುತ್ತಮುತ್ತ 24 ಗಂಟೆಯಲ್ಲಿ 93 ಮಿ.ಮಿ ಮಳೆ ದಾಖಲಾಗಿದ್ದರೆ ಮಡಿಕೇರಿ 97.79, ಶಾಂತಳ್ಳಿ 115.5,ಕೊಡ್ಲಿಪೇಟೆ 48.6,ಸೋಮವಾರಪೇಟೆ 46.4,ಸುಂಟಿಕೊಪ್ಪ 42, ಕುಶಾಲನಗರ 22.4 ಮಳೆ ದಾಖಲಾಗಿದೆ.

error: Content is protected !!