ಕೊಡಗಿನಲ್ಲಿ ಮಳೆಯಿಂದ 311 ಕೋಟಿ ನಷ್ಟ: ಜಿಲ್ಲಾಧಿಕಾರಿ ಮಾಹಿತಿ

ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಇದುವರೆಗೆ 311 ಕೋಟಿ 25 ಲಕ್ಷದ 42 ಸಾವಿರ ರೂ ಒಟ್ಟು ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮಾಹಿತಿ ನೀಡಿದ್ದಾರೆ.
23 ಮನೆಗಳು ಸಂಪೂರ್ಣ ಹಾನಿ,91 ಮನೆಗಳು ತೀವ್ರ, 311 ಮನೆಗಳು ಭಾಗಶಃ ಹಾನಿಯಾಗಿದ್ದು, ಒಟ್ಟು 425 ಮನೆಗಳಿಗೆ ಹಾನಿಯಾಗಿದೆ. ಬಹುತೇಕ ನಷ್ಟ ಪರಿಹಾರ ವಿತರಿಸಲಾಗಿದೆ.

ಇದಲ್ಲದೆ 88 ಸೇತುವೆಗಳು, 44 ಮೋರಿಗಳು, 125 ತಡೆಗೋಡೆಗಳು ಸೇರಿದಂತೆ, 35 ಅಂಗನವಾಡಿಗಳು, 142 ಶಾಲೆಗಳು, 25 ಪ್ರಾಥಮಿಕ ಆರೋಗ್ಯ ಕೇಂದ್ರ, 5 ಸರ್ಕಾರಿ ಕಟ್ಟಡ, 37 ಗ್ರಾಮ ಪಂಚಾಯಿತಿಯ ಕಟ್ಟಡ, 4 ಕುಡಿಯುವ ನೀರಿನ ಕೇಂದ್ರ ಹಾನಿಗೆ ಒಳಗಾಗಿದ್ದು ಕ್ಷಿಪ್ರ ನಷ್ಟ 82.01 ಹೆಕ್ಟೇರ್, ತೋಟಗಾರಿಕಾ ಪ್ರದೇಶ 36.2 ಹೆಕ್ಟೇರ್, ಮೀನುಗಾರಿಕೆ ವಲಯದಲ್ಲಿ 15.16 ಲಕ್ಷ ನಷ್ಟ ನೇರಿಗೆ 1156.04 ಕಿ.ಮಿ ರಸ್ತೆ,ರಾಷ್ಟ್ರೀಯ ಹೆದ್ದಾರಿ 5 ಕಿಲೋಮೀಟರ್ ನಷ್ಟು ಹಾನಿಗೆ ಒಳಗಾಗಿದೆ ಎಂದರು.

error: Content is protected !!