ಕೊಡಗಿನಲ್ಲಿ ಮತ್ತೆ ಹುಲಿ ಹಾವಳಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ದಕ್ಷಿಣ ಕೊಡಗಿನ ಕುಂದ ಗ್ರಾಮದಲ್ಲಿ ಹುಲಿ ಹಸುವೊಂದನ್ನು ಬಲಿ ಪಡೆದುಕೊಂಡಿದೆ.
ಇಲ್ಲಿನ ಈಚೂರುವಿನ ಬೆಳೆಗಾರ ಟಿ.ದೇವಯ್ಯ, ಶಾರದ ದಂಪತಿ ಸಾಕುತ್ತಿದ್ದ ಹಸುವನ್ನು ಮೇಯಲು ಬಿಟ್ಟಿದ್ದ ಸಂದರ್ಭ ದಾಳಿ ನಡೆದಿದೆ. ದಾಳಿಯ ತೀವ್ರತೆಗೆ ಹಸು ಸ್ಥಳದಲ್ಲೇ ಮೃತಪಟ್ಟಿದ್ದು ಸ್ಥಳಕ್ಕೆ ಪಶುವೈದ್ಯರು, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.