fbpx

ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು

ಕೊಡಗು: ಕರ್ಣಂಗೇರಿ ಗ್ರಾಮದ ಚಂದ್ರಗಿರಿ ನಿವಾಸಿ ಮಡಿಕೇರಿ ತಾಲೂಕು ಲಾರಿ ಮಾಲಿಕರ ಹಾಗು ಚಾಲಕರ ಸಂಘದ ಅಧ್ಯಕ್ಷ. ಕೆ‌.ಕೆ‌ ಶಿವಬೋಪಣ್ಣ(37) ಇಂದು ಮಕ್ಕಂದೂರು ಗ್ರಾಮದ ಉದಗಿರಿಯ ಕಾಫಿ ತೋಟ ಒಂದರಲ್ಲಿ ರಾತ್ರಿ ಅಂದಾಜು 10.30 ಗಂಟೆಗೆ ಗುಂಡೇಟಿಗೆ ಬಲಿಯಾಗಿದ್ದು. ಬೇಟೆಗೆ ಹೋಗಿದ್ದ ಸಂದರ್ಭ ಮಡಿಕೇರಿಯ ರಾಜೇಶ್ವರಿನಗರದ ನಿವಾಸಿ ದೇವಯ್ಯ ಹಾರಿಸಿದ ಗುಂಡು ಆಕಸ್ಮಿಕವಾಗಿ ತಗುಲಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

ಆರೋಪಿ‌ ದೇವಯ್ಯ ಪೊಲೀಸರಿಗೆ ಶರಣಾಗಿದ್ದು.
ಜೊತೆಗಿದ್ದ ಮತ್ತೊಬ್ಬ ಸಹಚರ ಚಂದ್ರಗಿರಿಯ ನಿವಾಸಿ ಶರಣ್ ಎನ್ನುವಾತನಿಗೂ ಗುಂಡು ತಗುಲಿ ಗಂಭೀರ ಗಾಯಗಳುಂಟಾಗಿದ್ದು ಆತ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ.

error: Content is protected !!