fbpx

ಕೊಡಗಿನಲ್ಲಿ ಬಿಜೆಪಿಯ ಭದ್ರಕೋಟೆಯಲ್ಲಿ ಬಿರುಕು ಮೂಡಿದೆ : ಜಿಲ್ಲಾ ಕಾಂಗ್ರೆಸ್ ಅಭಿಮತ

ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅಭ್ಯಾರ್ಥಿ ಸೋಲನ್ನು ಅನುಭವಿಸಿರಬಹುದು, ಸೋತರೂ ನಾವು ಗೆದ್ದಂತೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿಯಲ್ಲಿ ಮತ ಎಣಿಕೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನ ಭದ್ರಕೋಟೆಯ ಗೋಡೆಗಳನ್ನು ಬಿರುಕು ಮಾಡಲು ಯಶಸ್ವಿಯಾಗಿದ್ದೇವೆ ಎಂದರು.

ಪರಾಜಿತ ಕಾಂಗ್ರೆಸ್ ಅಭ್ಯಾರ್ಥಿ ಡಾ.ಮಂಥರ್ ಗೌಡ ಮಾತನಾಡಿ,ಈ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಭಿನ್ನಮತ ಬಹಿರಂಗಗೊಂಡಿದ್ದು,ಪ್ರಬಲ ಪೈಪೋಟಿ ನೀಡಿದ್ದೇವೆ. ಇಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಕೆಲಸ ಮಾಡಿದೆ ಎಂದರು. ಇನ್ನು ಮುಂದೆಯೂ ಪಕ್ಷದಲ್ಲಿದ್ದಕೊಂಡು ಜಿಲ್ಲೆಯ ಜನತೆಯ ಸೇವೆ ಮಾಡುವುದಾಗಿ ಎಂದರು.

ಇದೇ ಸಂದರ್ಭ ತನ್ನ ಸಣ್ಣ ವಯಸ್ಸಿಗೆ ಟಿಕೆಟ್ ನೀಡಿ ಅಭ್ಯಾರ್ಥಿಯನ್ನಾಗಿ ಮಾಡಿದ ರಾಜ್ಯ ಕಾಂಗ್ರಸ್ ನಾಯಕ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮತ ಚಲಾಯಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.

error: Content is protected !!