fbpx

ಕೊಡಗಿನಲ್ಲಿ ಪ್ರವಾಸಿಗರಿಗೆ ನಿಭ೯ಂಧ,ಲಸಿಕೆ ಕೊರತೆ ನೀಗಿಸಲು ಕಟ್ಟುನಿಟ್ಟಿನ ಕ್ರಮ: ಡಾ.ಸುಧಾಕರ್

ಕೋವಿಡ್ ನಿಬ೯ಂಧ ಸಂಬಂಧ ಮಡಿಕೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ.ಸುಧಾಕರ್ ಕೊಡಗಿನಲ್ಲಿ 1 ವಾರದಲ್ಲಿ ಶೇಕಡ 8 ಪಾಸಿಟಿವಿಟಿ ದರ ಇರುವುದು ಕೊಂಚ ಆತಂಕ ತಂದಿದೆ,ಸಾವಿನ ಪ್ರಮಾಣ ಕಡಮೆ ಇರುವುದು ಸಮಧಾನಕರವಾಗಿದೆ.

ಜಿಲ್ಲೆಯ ಹೋಂಸ್ಟೇ, ರೆಸಾಟ್೯ಗಳಿಗೆ ಹೊರಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಿರುವ ಮಾಹಿತಿ ಲಭ್ಯವಾಗಿದ್ದು ಸದ್ಯಕ್ಕೆ ಕೊಡಗಿನಲ್ಲಿ ನಿಭ೯ಂಧಿಸಬೇಕಾಗಿದೆ. ಹೊರಗಿನ ಪ್ರವಾಸಿಗರ ಬಗ್ಗೆ ಕಟ್ಟೆಚ್ಚರ ವಹಿಸಿ – ಜಿಲ್ಲಾಧಿಕಾರಿಗೆ ಸಚಿವ ಡಾ. ಸುಧಾಕರ್ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ನಿತ್ಯ 4000 ಲಸಿಕೆ ನೀಡಿಕೆಗೆ ಕ್ರಮ – ಲಸಿಕೆ ಕೊರತೆ ಆಗದಂತೆ ಗಮನ ನೀಡಲಾಗುತ್ತದೆ. ಸಕಾ೯ರ ನೀಡಿದ ಗುರಿಯನ್ನು ಲಸಿಕೆ ನೀಡಿಕೆಯಲ್ಲಿ ಕೊಡಗು ತಲುಪಿದೆ.ರಾಜ್ಯಕ್ಕೆ ನಾಳೆ ಅಧಿಕ ಲಸಿಕೆ ಪೂರೈಕೆಯಾಗಲಿದೆ ಎಂದರು.ಕೊಡಗಿನಲ್ಲಿ ಮರಣ ಪ್ರಮಾಣ ಮತ್ತು ರಾಜ್ಯ ವರದಿಯಲ್ಲಿ ಅಂಕಿ ಅಂಶ ವ್ಯತ್ಯಯವಾಗುತ್ತಿದ್ದು ಇದನ್ನು ಸರಿಪಡಿಸುವ ವಿಶ್ವಾಸ ಸಚಿವರು ವ್ಯಕ್ತಪಡಿಸಿದರು.

error: Content is protected !!