ಕೊಡಗಿನಲ್ಲಿ ಏರುತ್ತಿರುವ ಕೊರೋನಾ!

ಕೊಡಗು: ಜಿಲ್ಲೆಯಲ್ಲಿ ಈಗಾಗಲೇ 20.7% ನಷ್ಟು ಕರೋನಾ ಸೊಂಕು ವ್ಯಾಪಿಸಿದ್ದು, ಆತಂಕದ ವಾತಾವರಣ ಉಂಟಾಗಿದೆ. ಹೀಗಾಗಿ ಜಿಲ್ಲಾಡಳಿತ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಟೈಟ್ ಮಾಡುತ್ತಿದೆ.

ಹೊರ ರಾಜ್ಯ ಹೊರ ಜಿಲ್ಲೆ ಗಳಿಂದ ಕೊಡಗು ಜಿಲ್ಲೆಗೆ ಬಂದವರ ತುರ್ತು ಗಮನಕ್ಕೆ ತೆಗೆದುಕೊಳ್ಳಬೇಕು. ಕೊಡಗು ಜಿಲ್ಲೆಗೆ ಹೊರರಾಜ್ಯ , ಹೊರಜಿಲ್ಲೆ, ಹೊರ ಪ್ರದೇಶಗಳಿಂದ ಈ ದಿನಗಳಲ್ಲಿ ಬಂದವರು ಕಡ್ಡಾಯವಾಗಿ ಹತ್ತು ದಿನ ಮನೆಯಲ್ಲಿ ಇರಬೇಕು. ಸ್ವಯಂ ಸಂಪರ್ಕ ತಡೆಯಲ್ಲಿ ಮನೆಯೊಳಗೆ ಇರಬೇಕು. ಅಂತಹವರು ಹೊರಗಡೆ ಓಡಾಡುವಂತಿಲ್ಲ.

ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಪಕ್ಕದ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಪಡಿಸಬೇಕೆಂದು ಜಿಲ್ಲಾಡಳಿತ
ಸೂಚನೆ ನೀಡಿದೆ.

error: Content is protected !!