ಕೊಡಗಿನಲ್ಲಿ ಇಂದು ಹೈ ಅಲರ್ಟ್, ಖಾಕಿ ಪಡೆಯ ಸರ್ಪಗಾವಲು : ಮಡಿಕೇರಿ ವಾರದ ಸಂತೆ ಬಂದ್



ವಿಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಕೊಡಗು ಜಿಲ್ಲೆಗೆ ಆಗಮಿಸಿದ್ದ ಸಂದರ್ಭ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧ ಇಂದು ಕಾಂಗ್ರೆಸ್ ಎಸ್ಪಿ ಕಚೇರಿಗೆ ಮುತ್ತಿಗೆ ಸಲವಾಗಿ “ಮಡಿಕೇರಿ ಚಲೋ” ಪ್ರತ್ಯುತ್ತರವಾಗಿ ಗಾಂಧಿ ಮೈದಾನದಲ್ಲಿ ಬಿಜೆಪಿಯ “ಜನಜಾಗೃತಿ ಸಮಾವೇಶ” ಹಮ್ಮಿಕೊಂಡಿದ್ದ ಹಿನ್ನಲೆಯಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಹೇರಿ ಸಂಪೂರ್ಣ ನಿಷೇಧ ಹೇರಿತ್ತು. ಆದರೂ ಇಂದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಅತೀ ಸೂಕ್ಷ್ಮ ಪ್ರದೇಶದಲ್ಲಿ ಕೆಎಸ್ಆರ್ ಪಿ ತುಕಡಿಗಳು ಬೀಡು ಬಿಟ್ಟಿದ್ದು, ಒಂದು ಹಂತದಲ್ಲಿ ರೋಡ್ ಮಾರ್ಚ್ ನಡೆಸಲಾಗಿದೆ. ಜಿಲ್ಲೆಯ 16 ಗಡಿ ಭಾಗದಲ್ಲಿ ಅದರಲ್ಲೂ ಕೇರಳದ ಗಡಿಯಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಢ್ರೋನ್ ಕ್ಯಾಮರಾ ಕಟ್ಟೆಚ್ಚರ ವಹಿಸಲಾಗಿದೆ.

ಮಡಿಕೇರಿಯ ವಾರದ ಸಂತೆ ಬಂದ್:
ಪ್ರತೀ ಶುಕ್ರವಾರ ಜಿಲ್ಲಾ ಕೇಂದ್ರ ಮಹದೇವಪೇಟೆಯಲ್ಲಿರುವ ಮಾರುಕಟ್ಟೆಯಲ್ಲಿ ಸುತ್ತಮುತ್ತಲಿನ ಗ್ರಾಮದಿಂದ ಸ್ಥಳೀಯ ಹಣ್ಣು, ತರಕಾರಿ, ಸೇರಿದಂತೆ ಪಕ್ಕದ ಜಿಲ್ಲೆಯಿಂದ ವ್ಯಾಪಾರಸ್ಥರು ಮಾರಾಟ, ಖರೀದಿಗೆ ಬರುವ ಗ್ರಾಹಕರಿಂದ ಜನಜಂಗುಳಿ ವಾತಾವರಣ ಇರುತ್ತಿತ್ತು. ಆದರೆ ಇದೀಗ ಎಲ್ಲಿ ನೋಡಿದರೂ ಖಾಕಿ ಪಡೆಗಳದೇ ದರ್ಶನವಾಗುತ್ತಿದೆ.