ಕೊಡಗಿನಲ್ಲಿ ಆರೆಂಜ್ ಅಲರ್ಟ್

ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ ಮುಂದುವರೆದಿದೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬಿಟ್ಟುಬಿಡದೆ ಮಳೆ ಹೊಡೆಯುತ್ತಿದ್ದು,ಅಲ್ಲಲ್ಲಿ ಸಣ್ಣ ಭೂಕುಸಿತ ಉಂಟಾಗಿದ್ದು,ಆಕಾಶವಾಣಿ ಟವರ್ ಬಳಿ ಕುಸಿತ ಕಂಡು ಬಂದ ಹಿನ್ನಲೆ ಈ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ದೇವಸ್ತೂರು, ತಂತಿಪಾಲ, ಮಾದಾಪುರ, ಹಟ್ಟಿಹೊಳೆಯಲ್ಲಿ ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ.ನಾಪೋಕ್ಲು ಭಾಗದ
ಬಲಮುರಿ,ಬೋಳಿಬಾಣೆಯಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ 100 ಮಿ.ಮಿ ಮಳೆ ಉಂಟಾಗಿದ್ದು ತ್ರಿವೇಣಿ ಸಂಗಮದಲ್ಲಿ ಪ್ರವಾಹದ ಭೀತಿ
ಕರಡಿಗೋಡು, ನೆಲ್ಯುದಿಕೇರಿ, ಕೂಟುಹೊಳೆ ಗ್ರಾಮದಲ್ಲಿ ಗದ್ದೆಗೆ ನುಗ್ಗಿದ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.

ಇತ್ತ ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿ ನೀರು ಏರಿಕೆ ಕಂಡಿದ್ದು, ನಿಟ್ಟೂರು, ಬಾಳೆಲೆ ವ್ಯಾಪ್ತಿಯಲ್ಲೂ ಭತ್ತದ ಗದ್ದೆಗಳಿಗೆ ನೀರು ನುಡ್ಗಿರುವ ಬಗ್ಗೆ ವರದಿಯಾಗಿರುವುದು ಹೊರತುಪಡಿಸಿ ಮರಗಳ ರೆಂಬೆಕೊಂಬೆಗಳು ಬಿದ್ದು ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

error: Content is protected !!