ಕೊಡಗಿಗೆ ಹೆಮ್ಮೆ!!!


ಕೊಡಗು: ಕುಶಾಲನಗರ ಮೂಲದ ಐಎಎಸ್ ಅಧಿಕಾರಿ, ಪ್ರಸ್ತುತ ಬಳ್ಳಾರಿ ಜಿಲ್ಲಾಧಿಕಾರಿಯಾಗಿರುವ ಎಸ್.ಎಸ್.ನಕುಲ್ ಅವರನ್ನು ಕೇಂದ್ರ ಸೇವೆಗೆ ನಿಯೋಜಿಸಲಾಗಿದೆ.
ನಕುಲ್ ಅವರನ್ನು ಕೇಂದ್ರ ವಿತ್ತ ಸಚಿವೆ ನಿಮ೯ಲಾ ಸೀತಾರಾಮನ್ ಅವರ ಕಾಯ೯ದಶಿ೯ಯಾಗಿ ನೇಮಕಗೊಳಿಸಲಾಗಿದೆ.

ನಕುಲ್, ಕುಶಾಲನಗರದ ಹೆಸರಾಂತ ಉದ್ಯಮಿ, ರೋಟರಿ ನಿದೇ೯ಶಕ ಎಸ್.ಕೆ.ಸತೀಶ್ ದಂಪತಿ ಪುತ್ರರಾಗಿದ್ದು ಕನಾ೯ಟಕದ ವಿವಿದೆಡೆ ಜಿಲ್ಲಾಧಿಕಾರಿಯಾಗಿ ಅತ್ಯುತ್ತಮ ಹೆಸರು ಪಡೆದಿದ್ದರು.ಇದೀಗ ಕನಾ೯ಟಕದ ಐಎಎಸ್ ಅಧಿಕಾರಿ ವಿತ್ತ ಸಚಿವರ ಕಾಯ೯ದಶಿ೯ಯಾಗುವ ಅವಕಾಶ ಪಡೆದಿದ್ದಾರೆ.

error: Content is protected !!