ಕೊಡಗಿಗೆ ಆಕ್ಸಿಜನ್ ಉತ್ಪಾದನಾ ಘಟಕ!

ಕೇಂದ್ರದಿಂದ ಕೊಡಗಿಗೆ ಪ್ರಾಣವಾಯು ಉತ್ಪಾದನಾ ಘಟಕ ಬರಲಿದೆ.ರಾಜ್ಯದ 31 ಪ್ರದೇಶಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರ ಪುಟ್ಟ ಜಿಲ್ಲೆಯಾದರೂ,ಇಲ್ಲಿ ಪ್ರಾಣ ವಾಯು(ಆಕ್ಸಿಜನ್)ಉತ್ಪಾದನಾ ಘಟಕ ಇರಬೇಕೆಂದು ಕೇಂದ್ರ ಅಧಿಕೃತ ಮುದ್ರೆ ಹಾಕಿದೆ.
ಈಗಾಗಲೇ 13 ಸಾವಿರ ಲೀಟರ್ ನಷ್ಟು ಆಕ್ಸಜನ್ ಟ್ಯಾಂಕ್ ಹೊಂದಿರುವ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕೇಂದ್ರದಿಂದ ಸಿಕ್ಕಿರುವ ಮತ್ತೊಂದು ಕೊಡುಗೆಯಾಗಿದ್ದು,ಜಿಲ್ಲೆಯ ಮೇಲೆ ಕಾಳಜಿ ತೋರಿಸಿದಕ್ಕೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.