ಕೊಡಗರಹಳ್ಳಿಯಲ್ಲಿ ವನಮಹೋತ್ಸವ ಗ್ರೋ ಗ್ರೀನ್ ಹಸಿರು ಅಭಿಯಾನಕ್ಕೆ ಚಾಲನೆ


ಕೊಡಗು ಸಾಮಾಜಿಕ ಅರಣ್ಯ ವಿಭಾಗ ಹಾಗೂ ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದ ವತಿಯಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್, ಕರ್ನಾಟಕ ರಾಜ್ಯ ವಿಜ್ಞಾನ ‌ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಬೈತೂರಪ್ಪ ಪೊವ್ವದಿ ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಶುಕ್ರವಾರ ( ಆ.27 ರಂದು) ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯಲ್ಲಿ “ನಮ್ಮ ನಡೆ ಹಸಿರೆಡೆಗೆ”- ‘ಗ್ರೋ ಗ್ರೀನ್’ ಅಭಿಯಾನದಡಿ ಏರ್ಪಡಿಸಿದ್ದ ಹಸಿರು ನೆಡುತೋಪು ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಹಸಿರು ಅಭಿಯಾನಕ್ಕೆ ಚಾಲನೆ ನೀಡಲಾಯಿತು.
“ಅರಣ್ಯ ಬೆಳೆಸುವ ಮಹತ್ವ” ಕುರಿತು ಮಾಹಿತಿ ನೀಡಿದ ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆಯ ಎಸಿಎಫ್ ಮಂಡುವಂಡ ಎಸ್.ಚಂಗಪ್ಪ,
ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಗಿಡ- ಮರಗಳನ್ನು ಬೆಳೆಸುವ ಮೂಲಕ. ವಾತಾವರಣವನ್ನು ಶುದ್ಧವಾಗಿಡಲು ಹಾಗೂ ಹಸಿರೀಕರಣಕ್ಕೆ ಪ್ರಯತ್ನಿಸಬೇಕು ಎಂದರು.
ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಗ್ರಾಮದಲ್ಲಿ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ವಿವಿಧ ಜಾತಿಯ 500 ಅರಣ್ಯ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದ್ದು, ಈ ನೆಡುತೋಪು ಸಂರಕ್ಷಣೆಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

“ನೆಡುತೋಪು ಮತ್ತು ವನ ಮಹೋತ್ಸವದ ಮಹತ್ವ” ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಹಸಿರುಪಡೆ ಇಕೋ ಕ್ಲಬ್ ನ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಜಿಲ್ಲಾ ಪರಿಸರ ಜಾಗೃತಿ ಸಮಿತಿ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ,
ಸ್ವಚ್ಛಂದ ವಾತಾವರಣ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು ಉತ್ತಮ ವಾತಾವರಣ ನಿರ್ಮಿಸುವ ಕೆಲಸ ಮಾಡಬೇಕು ಎಂದರು.

ನೈಸರ್ಗಿಕವಾಗಿರುವ ಗಿಡ-ಮರ,ಗುಡ್ಡ-ಬೆಟ್ಟ,ನೀರು-ಗಾಳಿ ಇವುಗಳನ್ನು ಕಾಪಾಡುವುದು ಅವಶ್ಯಕತೆಯಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆರ್ ಎಫ್ ಓ ಟಿ.ಎಂ.ರವೀಂದ್ರ, ವನಮಹೋತ್ಸವದ ಮಹತ್ವ ಹಾಗೂ ಅರಣ್ಯ ಸಸಿಗಳನ್ನು ನೆಟ್ಟು ಬೆಳೆಸುವ ಕುರಿತು ತಿಳಿಸಿದರು.

ನಾವುಗಳು ಪರಿಸರ ಸಂರಕ್ಷಣೆಯೊಂದಿಗೆ ನೈಸರ್ಗಿಕ ಸಂಪತ್ತು ಕಾಪಾಡುವುದು ಅವಶ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್, ಇಂತಹ ಪರಿಸರ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕರಿಸಬೇಕು ಎಂದರು.
.ಗ್ರಾಮ ಪಂಚಾಯ್ತಿ ಅಧ್ಯಕ್ಷ ಆರ್.ಸುನೀತ್ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಕಾಳಜಿ ಬೆಳೆಸಿಕೊಂಡಾಗ ಉತ್ತಮ ಪರಿಸರ ಕಾಪಾಡಲು ಸಾಧ್ಯ ಎಂದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಕಾಫಿ ಬೆಳೆಗಾರ ಎಸ್.ಬಿ.ಶಂಕರ್ ವನಮಹೋತ್ಸವಕ್ಕೆ ಚಾಲನೆ ನೀಡಿದರು
ಗ್ರಾ.ಪಂ. ಪಿಡಿಓ ಆರ್.ಗಿರೀಶ್, ಸದಸ್ಯರಾದ ಕಲಾಮಣಿ, ಚನ್ನಬಸವಿ, ಆರ್.ಎಫ್.ಓ. ಪ್ರಫುಲ್ಲ, ಸಂಸ್ಥೆಯ ಸದಸ್ಯರಾದ ಅಕ್ಕಪಂಡ ಸನ್ನಿ ಕಾರ್ಯಪ್ಪ, ದತ್ತ ಸೋಮಣ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಕೆ.ಇಂದಿರಾ,ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಾಗೀರಥಿ, ಫಾರೆಸ್ಟರ್ ಫಿರೋಜ್ ಖಾನ್, ಪರಿಸರ ಪ್ರೇರಕ ಎಚ್.ಸಿ.ಗೋವಿಂದರಾಜ್, ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಎಂ.ಟಿ. ಶೋಭಾ, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು, ಸ್ಥಳೀಯರು ಇದ್ದರು. ಶಿಕ್ಷಕ ಶಿವಪ್ಪ ಗುರ್ಕಿ ನಿರ್ವಹಿಸಿದರು.
ಪರಿಸರ ಸಂರಕ್ಷಣೆ ಕುರಿತ ಫಲಕಗಳನ್ನು ಪ್ರದರ್ಶಿಸಲಾಯಿತು. ಇದೇ ವೇಳೆ ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ವಿವಿಧ ಜಾತಿಯ 50 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.

error: Content is protected !!