ಕೈವಾರ ತಾತಯ್ಯನವರ ಜಯಂತಿ ಸಮಾಜಕ್ಕೆ ಮಾದರಿ ಆಚರಣೆ

ಕಾಲಜ್ಞಾನಿ ಕೈವಾರ ತಾತಯ್ಯನವರ ಜಯಂತಿ ಆಚರಿಸುವ ಮೂಲಕ ಲೌಕಿಕ ವಿದ್ಯೆ ಶ್ರೇಷ್ಠ ಎಂದು ಸಾರಿದ ಮಹಾನ್ ವ್ಯಕ್ತಿಯ ಜಯಂತಿ ಆಚರಣೆ ಮೂಲಕ ಗೌರವ ನೀಡುತ್ತಿರುವುದು ಶ್ಲಾಘನೀಯ ಎಂದು ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ಕೈವಾರ ತಾತಯ್ಯನವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಆಧ್ಯಾತ್ಮಿಕತೆಯೊಂದಿಗೆ ಕನ್ನಡ ಹಾಗು ತೆಲುಗು ಭಾಷೆಯ ಮೂಲಕ ಹಲವಾರು ಕೀರ್ತನೆಗಳು ರಚಿಸಿದ ಮತ್ತು ಮರುಸೃಷ್ಟಿಸಿಕೊಳ್ಳಬಲ್ಲ ಶಕ್ತಿಯನ್ನು ಪಡೆದಿದ್ದ ಕೈವಾರ ತಾತಯ್ಯನವರ ಆಚರಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಅನುಧಾನ ಬಿಡುಗಡೆಯಾಗಿದೆ. ಬಲಿಜ ಸಮುದಾಯದ ಎಲ್ಲಾ ವರ್ಗದವರು ಇಂತಹ ಕಾರ್ಯಕ್ರಮವನ್ನು ಉತ್ತಮ ವಾಗಿ ನಡೆಸುವಂತಾಗಲಿ ಎಂದು ಹಾರೈಸಿದರು.